ಸಾಗಿದೆ ಹೋರಾಟ... ಚಳವಳಿ!
ನಾಳೆ ಆಗಸ್ಟ್ 15. ದೇಶದೆಲ್ಲೆಡೆ ದೊಡ್ಡ ಸಂಭ್ರಮ.
ದೂರದ ದೆಹಲಿಯ ಕೆಂಪುಕೋಟೆಯಿಂದ ಹಿಡಿದು ಇಲ್ಲೇ ನಮ್ಮ ಸುತ್ತಮುತ್ತಲಿನ ಶಾಲೆ, ಕಾಲೇಜು, ಕಚೇರಿ, ಸಂಘ ಸಂಸ್ಥೆಗಳಲ್ಲೆಲ್ಲ ಪರಸ್ಪರ ಸ್ವಾತಂತ್ರ್ಯೋತ್ಸವದ್ದೇ ಶುಭಾಶಯ ವಿನಿಮಯ.
ಎಲ್ಲೆಲ್ಲೂ ತಿರಂಗದ ಪಟ... ಪಟ ಹಾರಾಟ. ಪರಸ್ಪರ ಸಿಹಿ-ಖುಷಿಗಳ ಹಂಚೋಣ.
ಹೌದು,
ಎಲ್ಲೆಲ್ಲೂ ತಿರಂಗದ ಪಟ... ಪಟ ಹಾರಾಟ. ಪರಸ್ಪರ ಸಿಹಿ-ಖುಷಿಗಳ ಹಂಚೋಣ.
ಹೌದು,
ನಮಗೆ ಸ್ವಾತಂತ್ರ್ಯ ಬಂದು 64 ವರ್ಷಗಳು ಕಳೆದು ಹೋದವು. ಪರಕೀಯರ ಕಪಿಮುಷ್ಠಿಯಿಂದ ಹೊರಬರಲು ಅದೇನೆಲ್ಲಾ ಪಡಿಪಾಟಲು ಪಡಬೇಕಾಯಿತು, ಅದೆಷ್ಟು ಬಲಿದಾನಗಳು ಬೇಕಾದವು ಎನ್ನುವುದು ಇದಿಷ್ಟು ವರ್ಷ ಕಳೆದರೂ ನಾವ್ಯಾರೂ ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ.
ಸತ್ಯಾಗ್ರಹದ ಮೂಲಕ ನಮ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಆಯಾಮ ತಂದು ಕೊಟ್ಟವರು ಮಹಾತ್ಮಾಗಾಂಧಿ. ಈಗ ಅವರು ನಮ್ಮೊಂದಿಗಿಲ್ಲ. ನಮ್ಮನ್ನವರು ಅಗಲಿ ವರ್ಷಗಳೇ ಸಂದಿವೆ. ಆದರೂ ಅವರ ನೇತೃತ್ವದಲ್ಲಿ ತರಲಾದ 'ಸ್ವಾತಂತ್ರ್ಯ ಜ್ಯೋತಿ' ನಂತರದ ಬಹಳಷ್ಟು ವರ್ಷಗಳಲ್ಲಿ ಚೆನ್ನಾಗಿಯೇ ಉರಿಯುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಆ ಜ್ಯೋತಿಗೆ ಭ್ರಷ್ಟಾಚಾರವೆಂಬ ಕೆಟ್ಟ ತೈಲ ಸೇರಿಕೊಳ್ಳುವವರೆಗೆ. ಇಂದು ಅದೇ ಜ್ಯೋತಿಯ ಬೆಳಕಲ್ಲಿ ನಾವಿದ್ದೇವಾದರೂ ಅವರೆಲ್ಲ ಸೇರಿ ತಂದು ಕೊಡುವಾಗ ಇದ್ದ ಪ್ರಖರತೆ ಈಗ ಖಂಡಿತಾ ಅದಕ್ಕೆ ಇಲ್ಲ. ದಿನದಿಂದ ದಿನಕ್ಕೆ ಕೆಟ್ಟ ತೈಲದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಪರಿಣಾಮ, ಜ್ಯೋತಿ ಮಸುಕಾಗುತ್ತಿದೆಯಲ್ಲದೆ ಹಾಕಿದ ಬತ್ತಿಯೂ ಕರಟಿ ಹೋಗಿ ನಿಧಾನಕ್ಕೆ ನಂದುವ ಲಕ್ಷಣ ಗೋಚರಿಸುತ್ತಿದೆ.
ಈ ಜ್ಯೋತಿಯನ್ನು ಮತ್ತೆ ಉದ್ದೀಪನ ಗೊಳಿಸುವವರಾರು ಎಂಬ ನಿರೀಕ್ಷೆಯಲ್ಲಿರುವಾಗಲೇ ಮತ್ತೊಂದು ಆಶಾಕಿರಣ ನಮ್ಮ ನಡುವೆ ಆವಿರ್ಭವಿಸಿರುವುದು ನಿಜಕ್ಕೂ ಖುಷಿಯ ಸಂಗತಿ. ಬಹುಷಃ ಭಾರತ ಮಾತೆಗೂ ಇದು ಸಂತಸ ತಂದಿರಬಹುದು.
ಭ್ರಷ್ಟಾಚಾರಕ್ಕೆ ಸಿಕ್ಕಿದೇಶ ನಲುಗುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಆವಿರ್ಭವಿಸಿರುವ ಈ ಅಣ್ಣಾ ಹಜಾರೆ ಎಂಬ ಮುತ್ಸದ್ದಿ ಗಾಂಧೀಜಿಯ ಹೋರಾಟದ ಸಿದ್ಧಾಂತಗಳ ಪ್ರತಿಪಾದಕರೂ ಹೌದು. ಅವರೀಗ ಕೈಗೆತ್ತಿಕೊಂಡಿರುವ 'ಜನಲೋಕಪಾಲ್ ಮಸೂದೆ' ಕುರಿತ ಹೋರಾಟ ಒಂದರ್ಥದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟವಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಈಗ ಭಾರತದ ಜನತೆ ಅವರೊಂದಿಗೆ ನಿಲ್ಲಬೇಕಿದೆ. ಈ ಹೋರಾಟದಲ್ಲಿ ಹಜಾರೆಯನ್ನು ಗೆಲ್ಲಿಸುವ ಮೂಲಕ ನಾವೂ ಗೆದ್ದು, ಗಾಂಧೀಜಿ ಕಂಡ ಭ್ರಷ್ಟಾಚಾರ ರಹಿತ ಸ್ವತಂತ್ರ ಹಾಗೂ ಸಮೃದ್ಧ ಭಾರತ ರೂಪುಗೊಳಿಸಬೇಕಿದೆ. ಮಾತ್ರವಲ್ಲ, ಮತ್ತೊಮ್ಮೆ ನಿಜಾರ್ಥದಲ್ಲಿ ಸ್ವತಂತ್ರ, ಸಂಪೂರ್ಣ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಭಾರತ ತನ್ನ ಅಸ್ತಿತ್ವ ಕಂಡುಕೊಳ್ಳಬೇಕಿದೆ.
'ಹೀಗೇ ಕುಳಿತರೆ ನಮ್ಮ ದೇಶವನ್ನು
ನಿರ್ನಾಮ ಮಾಡಿಬಿಡುತ್ತಾರೆ.
ಭ್ರಷ್ಟಾಚಾರ ತೊಲಗಿಸಬೇಕು,
ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ'
ಹೀಗೆಂದು ಎಲ್ಲರಿಗಿಂತ ಮುಂದಾಗಿ ಉಪವಾಸ ಕುಳಿತು ಸರಕಾರವನ್ನೇ ನಡುಗಿಸಿದ ಈ ಅಣ್ಣಾ ಸಾಮಾನ್ಯರೇನಲ್ಲ.
ಅಣ್ಣಾ ಹಜಾರೆ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಡಾ.ಕಿಷನ್ ಬಾಬುರಾವ್ ಹಜಾರೆ ಜನಿಸಿದ್ದು 1940 ರಲ್ಲಿ. ಅವರು ಮೂಲತಃ ಮುಂಬೈ ಸಮೀಪದ ಅಹಮ್ಮದ್ ನಗರ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದವರು. ತಂದೆ ಆಯುರ್ವೇದ ಫಾರ್ಮಸಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅಣ್ಣಾಗೆ ಆರು ಮಂದಿ ಸೋದರ- ಸೋದರಿಯರು. ಬಡತನದ ಬೇಗೆಯಿಂದ ಮುಂಬೈಗೆ ಬಂದ ಅಣ್ಣಾ ಅಲ್ಲಿಯೇ ಉದ್ಯೋಗ ಹಿಡಿದುಕೊಂಡು ಒಂದಷ್ಟು ವರ್ಷಗಳನ್ನು ಕಳೆದರು. ಬಳಿಕ 1963ರಲ್ಲಿ ಭಾರತೀಯ ಸೇನೆ ಸೇರುವ ಮೂಲಕ ದೇಶ ಸೇವೆಗೆ ತಮ್ಮನ್ನು ತಾವು ಪೂರ್ಣವಾಗಿ ಅರ್ಪಿಸಿಕೊಂಡರು. 1965ರಲ್ಲಿ ನಡೆದ ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಪವಾಡವೋ ಎಂಬಂತೆ ಬದುಕಿ ಬಂದ ಅಣ್ಣಾ 1975ರಲ್ಲಿ ಸೇನೆಯ ವೃತ್ತಿಗೆ ಸ್ವನಿವೃತ್ತಿ ಘೋಷಿಸಿ ತಮ್ಮ ಹಳ್ಳಿಯಾದ ರಾಲೆಗನ್ ಸಿದ್ಧಿಗೆ ಬಂದರು. ಬಳಿಕ 'ತರುಣ್ ಮಂಡಲ್' ಹೆಸರಿನ ಯುವಕರ ಸಂಘವೊಂದನ್ನು ಕಟ್ಟಿಕೊಂಡು ಹಳ್ಳಿಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಅಣ್ಣಾ ನೇತೃತ್ವದಲ್ಲಿ ಆ ಹಳ್ಳಿ ಅದೆಷ್ಟು ಅಭಿವೃದ್ಧಿ ಹೊಂದಿತೆಂದರೆ ಅವರ ಕಾರ್ಯ ಗುರುತಿಸಿ 1992ರಲ್ಲಿ ಭಾರತ ಸರ್ಕಾರವೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಇಷ್ಟೇ ಅಲ್ಲ, ಸಾಮಾಜಿಕ ಕಾಳಜಿ ಹೊಂದಿರುವ ಅಣ್ಣಾ ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಹಳ್ಳಿಯಲ್ಲಿ ಶಿಕ್ಷಣ ಹಾಗೂ ಸುಶಿಕ್ಷಿತರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ 1979ರಲ್ಲಿ 'ಸಂತ ಯಾದವ ಬಾಬಾ ಶಿಕ್ಷಣ ಪ್ರಸರಕ ಮಂಡಲಿ' ನಿರ್ಮಾಣ ಮಾಡಿ ಸುಮಾರು ನಾಲ್ಕು ಲಕ್ಷ ರೂ.ಗಳ ಸರಕಾರ ಧನ ಸಹಾಯದೊಂದಿಗೆ ಹೈಸ್ಕೂಲ್ ನಿರ್ಮಾಣಕ್ಕೆ ನೆರವಾದರು. 2005- ಮಾಹಿತಿ ಹಕ್ಕು ಕಾಯ್ದೆ ಕಾರ್ಯಗತವಾದ ಮೇಲೆ ಈ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುತ್ತಾ ರಾಜ್ಯದಲ್ಲಿ 12 ಸಾವಿರ ಕಿಲೋ ಮೀಟರ್ ಗೂ ಹೆಚ್ಚು ದೂರ ಸಂಚರಿಸಿದರು. ಈ ಬಗ್ಗೆ ಒಂದು ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ರಾಜ್ಯದ 24 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದರು. ಈ ಮಹಾ ಚಳುವಳಿಯಲ್ಲಿ ಭಿತ್ತಿಪತ್ರ ಪ್ರದರ್ಶನಗೊಂಡವು. ಕಾಯ್ದೆಯ ನಿಬಂಧನೆಗಳ ಪುಸ್ತಕಗಳನ್ನು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಎಲ್ಲೆಡೆ ಸಾಕಷ್ಟು ಜಾಗೃತಿ ಉಂಟು ಮಾಡಿತ್ತಲ್ಲದೆ, ನಾಗರಿಕ ಹಕ್ಕುಗಳ ಬಗ್ಗೆ ಸಾಮಾನ್ಯ ಜನರೂ ತಿಳಿಯುವಂತಾಯಿತು.
ಇಂದು ನಿನ್ನೆಯಲ್ಲ, ಭ್ರಷ್ಟಾಚಾರದ ವಿರುದ್ಧ ಅಣ್ಣಾ ಬಹುಹಿಂದಿನಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

'The dream of India as a Strong nation
will not be realised without self reliant
self-sufficient villages, this can be
achived only through social commitment
and involvement of the common man'
ಎನ್ನುವ ಅಣ್ಣಾ ಕೆಟ್ಟ ತೈಲದಿಂದಾಗಿ ಮಬ್ಬು ಮಬ್ಬಾಗಿ ಉರಿಯುವ ಜ್ಯೋತಿಯನ್ನು ಮತ್ತೆ ಉದ್ದೀಪನ ಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ಇವಿಷ್ಟು ವರ್ಷಗಳಾದರೂ ಸ್ವತಂತ್ರ ಭಾರತ ಎಂದು ಎದೆಯುಬ್ಬಿಸಿ ಹೇಳಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿಯಲ್ಲಿ ಅವರ ಹೋರಾಟಕ್ಕೆ ಖಂಡಿತಾ ಬೆಂಬಲ ಸಿಗಲೇ ಬೇಕಿದೆ.
ಒಂದರ್ಥದಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದೇಶಕ್ಕೆ ಹೊಸತೊಂದು ದಿಕ್ಕು ತೋರಬೇಕಾಗಿದೆ. ಜನಲೋಕಪಾಲ್ ಮಸೂದೆ ಸಂಬಂಧಿಸಿದಂತೆ ರಾಷ್ಟವ್ಯಾಪಿ ಚರ್ಚೆಗೆ ಚಾಲನೆ ದೊರಕಿರುವ ಈ ಸಂದರ್ಭದಲ್ಲಿ ಈ ಕುರಿತು ಹೋರಾಟ ಕೈಗೆತ್ತಿಕೊಳ್ಳುವ ಜೊತೆಗೆ ಭಾರತವನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ಮೂಲಕ 47ರ ಸ್ವಾತಂತ್ರ್ಯದ ಪರಮೋಚ್ಛ ಉದ್ದೇಶವನ್ನು ಈಡೇರಿಸಿಕೊಳ್ಳುವತ್ತ ನಾವಿದನ್ನು ಬಳಸಿಕೊಳ್ಳಬೇಕಾಗಿದೆ.ಕರ್ನಾಟಕದಲ್ಲಿ ಲೋಕಾಯುಕ್ತರು ಭ್ರಷ್ಟಾಚಾರ ವಿರುದ್ಧ ನಡೆಸಿದ ಹೋರಾಟ ಮತ್ತು ಘನತೆಯಿಂದ ಹುದ್ದೆ ನಿರ್ವಹಿಸಿದ ರೀತಿ ಹಾಗೂ ಸಮಸ್ತ ಕಾರ್ಯನಿರ್ವಹಣೆ ಜನಲೋಕಪಾಲ ಮಸೂದೆಯ ನಿರ್ವಹಣೆಯಲ್ಲೂ ಯಶಸ್ಸಿನ ಸಾಧ್ಯತೆಗಳತ್ತ ಬೊಟ್ಟುಮಾಡಿದೆ.
ದೇಶವ್ಯಾಪಿ ಚಳವಳಿಗೆ ಇದು ಸಕಾಲ. ಭವ್ಯ ಹಾಗೂ ಸಮೃದ್ಧ ಭಾರತದ ಮರು ನಿರ್ಮಾಣಕ್ಕಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೊಸ ಹೋರಾಟಕ್ಕೊಂದು ಸ್ಪೂರ್ತಿಯಾಗಬೇಕು.
ಆ ಮೂಲಕ ಸ್ವಾತಂತ್ರ್ಯ ಜ್ಯೋತಿಯಲ್ಲಿ ಸೇರಿರುವ ಕೆಟ್ಟತೈಲ ನಿರ್ಮೂಲನೆಯಾಗಬೇಕು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ