ಕೈಯಲ್ಲಿ ಕಟ್ಟಿದ ರಾಖಿ ಇನ್ನೂ ಬಣ್ಣ ಕೂಡಾ ಮಾಸಿಲ್ಲ.
ಆಗಲೇ ಮತ್ತೆ ರಾಖಿಹಬ್ಬ ಬಂದೇಬಿಟ್ಟಿದೆ.
ರಾಖಿ ಹಬ್ಬದಂದು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಸಂಭ್ರಮವೇ. ಕರಾವಳಿಯಲ್ಲಿ ವಿಶೇಷವಾಗಿ ವಿವಿಧ ಸಂಘ, ಸಂಸ್ಥೆಗಳು ಮುತುವರ್ಜಿ ವಹಿಸಿ ಸಾಮೂಹಿಕವಾಗಿ ರಾಖಿ ಹಬ್ಬವನ್ನು ಆಚರಿಸಿಕೊಳ್ಳುವುದು ಕಾಣಬಹುದು.
ಪ್ರತೀ ವರ್ಷ ಆಗಸ್ಟ್ 13ರಂದು ಆಚರಿಸಲ್ಪಡುವ ರಾಖಿ ಹಬ್ಬ ಅಥವಾ ರಕ್ಷಾ ಬಂಧನ ಸಹೋದರ ಸಹೋದರಿಯರ ಪವಿತ್ರ ಸಂಬಂಧದ ದ್ಯೋತಕವೂ ಹೌದು. ಈ ದಿನದಂದು ಸಹೋದರ-ಸಹೋದರಿಯರು ಎಲ್ಲೇ ಇದ್ದರೂ ಪರಸ್ಪರ ನೆನಪಿಸಿಕೊಳ್ಳುತ್ತಾರೆ.
ಅಂದಹಾಗೆ ಈ ಬಂಧನಕ್ಕೊಳಪಡಲು ಒಡಹುಟ್ಟಿದ ಸೋದರ-ಸೋದರಿಯರೇ ಆಗಬೇಕೆಂದೇನೂ ಇಲ್ಲ. ವರ್ಷಂಪ್ರತಿ ಅದೆಷ್ಟೋ ಮಂದಿಯನ್ನು ಈ ಹಬ್ಬ ಪರಸ್ಪರ ಸಹೋದರತೆಯ ಬಂಧ ಬೆಸೆದ ಉದಾಹರಣೆಗಳಿವೆ. ರಾಖಿ ಹಬ್ಬದಂದು ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟಿ ತನ್ನ ಪ್ರೀತಿ ತೋರಿಸಿಕೊಳ್ಳುತ್ತಾಳೆ. ಸಹೋದರನೂ ಅಷ್ಟೇ ಆಕೆಯ ಪ್ರೀತಿಗೆ ಬದ್ಧನಾಗಿ ಸದಾ ಆಕೆಯ ಮಾನ, ಪ್ರಾಣಗಳಿಗೆ ರಕ್ಷಣೆ ಕೊಡುವ ಬದ್ಧತೆಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆಕೆಯ ಬಾಯಿಗೆ ಸಿಹಿ ಇಟ್ಟು ಉಡುಗೊರೆಯನ್ನೂ ಕೊಡುತ್ತಾನೆ.
ಪರಸ್ಪರ, ಪ್ರೀತಿ, ವಿಶ್ವಾಸಗಳ ಬಂಧನ ಬೆಸೆಯುವ ಈ ಹಬ್ಬ ಸಮೀಪಿಸಿತೆಂದರೆ ಸಾಕು. ಎಲ್ಲಾ ಅಂಗಡಿಗಳಲ್ಲೂ ಬಣ್ಣಬಣ್ಣದ ವಿವಿಧ ಗಾತ್ರದ ರಾಖಿಗಳು ರಾರಾಜಿಸುತ್ತವೆ. ಒಂದು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗೂ ಈ ರಾಖಿಗಳು ದೊರೆಯುತ್ತದೆ.
ಇಂದಿನ ಮಕ್ಕಳಿಗೆ ಈ ಹಬ್ಬದ ಬಗ್ಗೆ ತಿಳಿಸಿ ಹೇಳುವವರೇ ಇಲ್ಲ ಎಂಬಂತಾಗಿದೆ. 'ರಾಖಿ' ಎಂಬುದರ ಪಾವಿತ್ರ್ಯತೆ ಏನು, ಪ್ರಾಮುಖ್ಯತೆ ಏನು ಎಂಬುದೂ ತಿಳಿಯದೆ ಕೈ ತುಂಬಾ ರಾಖಿ ಕಟ್ಟಿಕೊಂಡು ಮೆರೆಯುವವರನ್ನೂ ನಾವು ಇಂದು ಕಾಣಬಹುದು.
ಪರಸ್ಪರ ತ್ಯಾಗ, ಸಹೋದರತೆ ದೃಷ್ಟಿಯಿಂದ ರಾಖಿ ಹಬ್ಬ ಆಚರಿಸಿಕೊಂಡರಷ್ಟೇ ಅದಕ್ಕೊಂದು ಸಾರ್ಥಕತೆ ಬಂದೀತು.
ಹಾಗಾಗಿ ಈ ಬಾರಿಯ ರಾಖಿ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸೋಣ!
ನಿನ್ನೆ ಮೊನ್ನೆಯಷ್ಟೇ ಮುದ್ದಿನ ತಂಗಿ ಓಡೋಡಿ ಬಂದು ಕೈಗೊಂದು ರಾಖಿ ಕಟ್ಟಿ ಮುಗುಳ್ನಕ್ಕ ನೆನಪು. ಈಗ ಅವಳು ಮತ್ತೆ ರಾಖಿ ಹಿಡಿದು ಬರುವ ಸರದಿ.
ದಿನಗಳು ಅದೆಷ್ಟು ಬೇಗನೇ ಉರುಳಿ ಹೋಗುತ್ತವಲ್ಲವೇ?
ರಾಖಿ ಹಬ್ಬದಂದು ಬಣ್ಣ ಬಣ್ಣದ ರಾಖಿ ಕಟ್ಟಿ ಖುಷಿಪಡುವ ಹೆಚ್ಚಿನ ಮಂದಿಗೆ ಹಬ್ಬದ ಹಿನ್ನೆಲೆ ಖಂಡಿತಾ ಗೊತ್ತಿರಲಾರದು. ನಮ್ಮ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿ ಸಂಬಂಧಕ್ಕೆ ಪವಿತ್ರವಾದ ಸ್ಥಾನ ನೀಡಲಾಗಿದೆ. ಇದನ್ನು ಮತ್ತೆ ಮತ್ತೆ ನೆನಪಿಸುವ ಉದ್ದೇಶ ಈ ಹಬ್ಬದ್ದು. ರಾಖಿ ಕಟ್ಟಿಸಿಕೊಂಡ ಸಹೋದರನಿಗೆ ರಾಖಿ ಕಟ್ಟಿದ ಸಹೋದರಿಯನ್ನು ರಕ್ಷಿಸುವ ಹೊಣೆಯಿರುತ್ತದೆ. ಇತಿಹಾಸ ಕೆದಕಿದರೆ ರಜಪೂತರ ಕಾಲದಲ್ಲಿ ಈ ಹಬ್ಬ ಅತ್ಯಂತ ಮಹತ್ವ ಪಡೆದುಕೊಂಡಿದ್ದುದು ಕಂಡುಬರುತ್ತದೆ. ಈ ಹಬ್ಬವನ್ನು ನಾಡಿನೆಲ್ಲೆಡೆ ಆಚರಿಸುತ್ತಾರಾದರೂ ಕರಾವಳಿಯಲ್ಲಿ ಮಾತ್ರ ಇದು ಒಂದಿಷ್ಟು ಸ್ಪೆಷಲ್.ರಾಖಿ ಹಬ್ಬದಂದು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಸಂಭ್ರಮವೇ. ಕರಾವಳಿಯಲ್ಲಿ ವಿಶೇಷವಾಗಿ ವಿವಿಧ ಸಂಘ, ಸಂಸ್ಥೆಗಳು ಮುತುವರ್ಜಿ ವಹಿಸಿ ಸಾಮೂಹಿಕವಾಗಿ ರಾಖಿ ಹಬ್ಬವನ್ನು ಆಚರಿಸಿಕೊಳ್ಳುವುದು ಕಾಣಬಹುದು.
ಪ್ರತೀ ವರ್ಷ ಆಗಸ್ಟ್ 13ರಂದು ಆಚರಿಸಲ್ಪಡುವ ರಾಖಿ ಹಬ್ಬ ಅಥವಾ ರಕ್ಷಾ ಬಂಧನ ಸಹೋದರ ಸಹೋದರಿಯರ ಪವಿತ್ರ ಸಂಬಂಧದ ದ್ಯೋತಕವೂ ಹೌದು. ಈ ದಿನದಂದು ಸಹೋದರ-ಸಹೋದರಿಯರು ಎಲ್ಲೇ ಇದ್ದರೂ ಪರಸ್ಪರ ನೆನಪಿಸಿಕೊಳ್ಳುತ್ತಾರೆ.
ಅಂದಹಾಗೆ ಈ ಬಂಧನಕ್ಕೊಳಪಡಲು ಒಡಹುಟ್ಟಿದ ಸೋದರ-ಸೋದರಿಯರೇ ಆಗಬೇಕೆಂದೇನೂ ಇಲ್ಲ. ವರ್ಷಂಪ್ರತಿ ಅದೆಷ್ಟೋ ಮಂದಿಯನ್ನು ಈ ಹಬ್ಬ ಪರಸ್ಪರ ಸಹೋದರತೆಯ ಬಂಧ ಬೆಸೆದ ಉದಾಹರಣೆಗಳಿವೆ. ರಾಖಿ ಹಬ್ಬದಂದು ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟಿ ತನ್ನ ಪ್ರೀತಿ ತೋರಿಸಿಕೊಳ್ಳುತ್ತಾಳೆ. ಸಹೋದರನೂ ಅಷ್ಟೇ ಆಕೆಯ ಪ್ರೀತಿಗೆ ಬದ್ಧನಾಗಿ ಸದಾ ಆಕೆಯ ಮಾನ, ಪ್ರಾಣಗಳಿಗೆ ರಕ್ಷಣೆ ಕೊಡುವ ಬದ್ಧತೆಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆಕೆಯ ಬಾಯಿಗೆ ಸಿಹಿ ಇಟ್ಟು ಉಡುಗೊರೆಯನ್ನೂ ಕೊಡುತ್ತಾನೆ.
ಪರಸ್ಪರ, ಪ್ರೀತಿ, ವಿಶ್ವಾಸಗಳ ಬಂಧನ ಬೆಸೆಯುವ ಈ ಹಬ್ಬ ಸಮೀಪಿಸಿತೆಂದರೆ ಸಾಕು. ಎಲ್ಲಾ ಅಂಗಡಿಗಳಲ್ಲೂ ಬಣ್ಣಬಣ್ಣದ ವಿವಿಧ ಗಾತ್ರದ ರಾಖಿಗಳು ರಾರಾಜಿಸುತ್ತವೆ. ಒಂದು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗೂ ಈ ರಾಖಿಗಳು ದೊರೆಯುತ್ತದೆ.
ಇಂದಿನ ಮಕ್ಕಳಿಗೆ ಈ ಹಬ್ಬದ ಬಗ್ಗೆ ತಿಳಿಸಿ ಹೇಳುವವರೇ ಇಲ್ಲ ಎಂಬಂತಾಗಿದೆ. 'ರಾಖಿ' ಎಂಬುದರ ಪಾವಿತ್ರ್ಯತೆ ಏನು, ಪ್ರಾಮುಖ್ಯತೆ ಏನು ಎಂಬುದೂ ತಿಳಿಯದೆ ಕೈ ತುಂಬಾ ರಾಖಿ ಕಟ್ಟಿಕೊಂಡು ಮೆರೆಯುವವರನ್ನೂ ನಾವು ಇಂದು ಕಾಣಬಹುದು.
ಪರಸ್ಪರ ತ್ಯಾಗ, ಸಹೋದರತೆ ದೃಷ್ಟಿಯಿಂದ ರಾಖಿ ಹಬ್ಬ ಆಚರಿಸಿಕೊಂಡರಷ್ಟೇ ಅದಕ್ಕೊಂದು ಸಾರ್ಥಕತೆ ಬಂದೀತು.
ಹಾಗಾಗಿ ಈ ಬಾರಿಯ ರಾಖಿ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸೋಣ!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ