ಕರಾವಳಿಯಲ್ಲಿ ಒಂದೊಮ್ಮೆ ಎಲ್ಲೆಲ್ಲೂ ನಾಟಿಕೋಳಿಗಳದ್ದೇ ದರ್ಬಾರು ನಡೆಯುತ್ತಿತ್ತು.
ಈ ಹಿಂದೆ ಕರಾವಳಿಯಲ್ಲಿ ನಾಟಿ ಕೋಳಿ ಕೂಗಿದರೇನೇ ಬೆಳಗಾಗುತ್ತಿತ್ತು ಎಂಬ ಪರಿಸ್ಥಿತಿಯಿತ್ತು..!
ನಾಟಿಕೋಳಿಗಳ ಕ್ಕೊಕ್ಕೊಕ್ಕೋ ಧ್ವನಿಯೂ ಕೇಳಲು ಒಂಥರಾ ಇಂಪು.
ಆದರೆ ಇಂದು...
ಆದರೆ ಇಂದು...
ಎಲ್ಲವೂ ಹೈಬ್ರೀಡ್ ಯುಗ. ನಮಗೆನಿದ್ದರೂ ಅರ್ಜೆಂಟ್. ಕಾಯಲು ಪುರುಸೊತ್ತಿಲ್ಲ. ತಾಳ್ಮೆಯೂ ಇಲ್ಲ. ಹೈಬ್ರೀಡ್ ಜಾತಿಯ ಕೋಳಿಗಳಾದ ಬ್ರಾಯ್ಲರ್, ಟೈಸನ್, ಗಿರಿರಾಜ, ಟರ್ಕಿ, ಸೈಗಾನ್ ಜಾತಿಯ ಕೋಳಿಗಳು ಖಾದ್ಯಕ್ಕೆ ಮಾತ್ರ ಬಳಕೆಯಾಗುವಂತದ್ದು.
ಆದರೆ ನಾಟಿಕೋಳಿಗಳು ಹಾಗಲ್ಲ. ಹೇಳಿಕೇಳಿ ಕರಾವಳಿಯ ಆದರಲ್ಲೂ ತುಳುನಾಡಿನ ಜನರಿಗೆ ಕೋಳಿ ಅಂಕ ಬಹು ಇಷ್ಟವಾದ ಕ್ರೀಡೆ. ತಮ್ಮ ಎಡೆಬಿಡದ ಕೃಷಿ ಕಾರ್ಯದ ಮಧ್ಯೆ ಒಂದಿಷ್ಟು ಬಿಡುವು ಮಾಡಿಕೊಂಡು, ಕೋಳಿ ಅಂಕದಲ್ಲಿ ಪಾಲ್ಗೊಳ್ಳುತ್ತಾರೆ ನಮ್ಮ ಕರಾವಳಿಗರು. ಆಗ ನಮಗೆ ನಾಟಿಕೋಳಿಗಳ ನೆನಪಾಗುತ್ತವೆ. ಹೈಬ್ರೀಡ್ ಕೋಳಿಗಳು ದೇಹಾಕೃತಿಯಲ್ಲಿ ಬಲಿಷ್ಠವಾಗಿ ಕಂಡು ಬಂದರೂ, ಕೋಳಿ ಕಾಳಗದಲ್ಲಿ ನಮ್ಮೂರ ನಾಟಿಕೋಳಿಗಳ ಎದುರು ಇವೆಲ್ಲಾ ಯಾವ ಲೆಕ್ಕಕ್ಕೂ ಇಲ್ಲ. ಹಾಗಾಗಿಯೇ ಇಂದು ಒಂದೊಂದು ಊರ ಕೋಳಿಯೂ 800-1000 ರೂಪಾಯಿ ಬೆಳೆಬಾಳುತ್ತದೆ. ಕೋಳಿ ಅಂಕದಲ್ಲಿ ಕಟ್ಟುವ ಕೋಳಿಗಳು 10 ಸಾವಿರದಿಂದ ಹಿಡಿದು 25 ಸಾವಿರ ರೂ. ವರೆಗೆ ಮಾರಾಟವಾದ ದಾಖಲೆಯೂ ಇದೆ.
ನಾಟಿಕೋಳಿಯ ಮೊಟ್ಟೆಗೂ ಅತಿಯಾದ ಬೇಡಿಕೆಯಿದೆ. ಒಂದು ಮೊಟ್ಟೆಗೆ 10ರಿಂದ 12 ರೂ. ವರೆಗೂ ದರವಿರುತ್ತದೆ. ಇಷ್ಟು 'ಕಾಸ್ಟ್ಲಿ'ಯಾದ್ರು ಬೇಡಿಕೆ ಮಾತ್ರ ಕುಗ್ಗಿಲ್ಲ.ದುಡ್ಡುಕೊಟ್ಟರೂ ನಾಟಿಕೋಳಿಯ ಮೊಟ್ಟೆ ಸಿಗೋದಿಲ್ಲ ಎನ್ನುವ ಸ್ಥಿತಿಯಿದೆ.
ನಾಟಿ ಕೋಳಿ ಮಾಂಸದಿಂದ ಮಾಡಿದ ಪದಾರ್ಥ ಅತ್ಯಂತ ರುಚಿಕರ. ಆದ್ದರಿಂದಲೇ ನಾಟಿಕೋಳಿ ಮಾಂಸಕ್ಕೆ ಕೆ.ಜಿ.ಗೆ 150 ರಿಂದ 200 ರು.ವರೆಗೆ ದರವಿದೆ. ನಾಟಿಕೋಳಿಗಳಿಗೆ ಇಷ್ಟೊಂದು ಬೇಡಿಕೆಯಿರಲು ಈಗ ಅದನ್ನು ಸಾಕುತ್ತಿರುವವರು ಕಡಿಮೆಯಾಗಿರುವುದೇ ಕಾರಣ. ನಮ್ಮ ಕರಾವಳಿಯ ಜನರು ಕೃಷಿಯಿಂದ ವಿಮುಖರಾಗುತ್ತಿರುವುದೂ ಇದಕ್ಕೆ ಕಾರಣ.ಬೇಸಾಯ ಮಾಡದ ಮನೆಗಳಲ್ಲಿ ಭತ್ತ ಇರೋದಿಲ್ಲ. ನಾಟಿಕೋಳಿಗೆ ಭತ್ತ ಅತ್ಯಗತ್ಯ. ಆದ್ದರಿಂದ ಈ ನಾಟಿಕೋಳಿಗಳ ಉಸಾಬರಿಯೇ ಬೇಡ ಎಂದುಕೊಳ್ಳುತ್ತಿದ್ದಾರೆ ಇಲ್ಲಿಯ ಮಂದಿ.
ನಾಟಿಕೋಳಿಗಳಲ್ಲಿ ಅದೆಷ್ಟು ವೈವಿದ್ಯತೆಯಿದೆ ಎಂದು ತಿಳಿದುಕೊಳ್ಳಲು ಬೇಕಾದರೆ ಒಮ್ಮೆ ಕೋಳಿ ಅಂಕ ನಡೆಯುವಲ್ಲಿಗೆ ಹೋಗಿ ಬನ್ನಿ. ಕೆಮ್ಮಯಿರೆ, ಕಾವೆ, ಕುಪುಳ, ಮಂಜೋಳ್ , ಪೆರಡಿಂಗ, ಮೈಪೆ, ಬೊಳ್ಳೆ, ಗಿಡಿಯ, ಕರ್ಬೊಳ್ಳೆ, ಪಂಚಣಿ.. ಹೀಗೆ ವೈವಿಧ್ಯ ತಳಿಯ ಕೋಳಿಗಳನ್ನು ಅಲ್ಲಿ ಕಾಣಬಹುದು. ಕೆಲವು ಕೋಳಿಗಳು ಹತ್ತಾರು ಕೋಳಿಅಂಕದಲ್ಲಿ ಗೆದ್ದು ಬಂದ ಸಾಧನೆ ತೋರಿದವು.ಈ ಹಿಂದೆ ಕೋಳಿ ಅಂಕಕ್ಕೆಂದೇ ಉಪಯೋಗಿಸುತ್ತಿದ್ದ ಕುಕ್ಕುಟ ಪಂಚಾಂಗ ಇತ್ತು. ಈಗ ಅದೂ ಅಪರೂಪವಾಗುತ್ತಿದೆ.
ದೈವಕ್ಕೂ ಗಿರಿರಾಜ..!

ತುಳುನಾಡಿನಲ್ಲಿ ದೈವಗಳನ್ನು ನಂಬುವವರು ಹೆಚ್ಚು ಮಂದಿಯಿದ್ದಾರೆ. ದೈವಾರಾಧನೆ, ಭೂತಾರಾಧನೆ ಸಂದರ್ಭದಲ್ಲಿ ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಆದರೆ ಈ ಹಿಂದೆ ಹೀಗೆ ಬಲಿಕೊಡಲು ನಾಟಿ ಕೋಳಿಗಳೇ ಬೇಕು ಎಂಬ ಸಂಪ್ರದಾಯವಿತ್ತು. ಆದರೆ ಈಗ ಸಂಪ್ರದಾಯ ಮೂಲೆಗುಂಪಾಗಿದೆ. ನಾಟಿ ಕೋಳಿ ಸಿಗದಿದ್ದರೆ ಹೈಬ್ರೀಡ್ ಕೋಳಿಯೂ ಆದೀತು ಎಂಬ ಪರಿಸ್ಥಿತಿಯಿದೆ.
ಕಾಲಾಯ ತಸ್ಮೈ ನಮ: !

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ