ಬುಧವಾರ, ಜೂನ್ 8, 2011

ಆನೆಯಲ್ಲ ಗಣೇಶ...?!


ಮೈಸೂರಿನಲ್ಲಿ ಇಂದು ಆನೆಗಳ ರುದ್ರ ತಾಂಡವ ಕಂಡ ಜನತೆ ಇನ್ನು ಆಘಾತದಿಂದ ಚೇತರಿಸಿಕೊಂಡಿಲ್ಲ.
ಈ ಕಾಡಾನೆಗಳು ನಗರದೊಳಕ್ಕೆ ಏಕಾಏಕಿ ನುಗ್ಗಿದ್ದಾದರೂ ಹೇಗೆ?
ಇನ್ನೂ ಗೊಂದಲದಲ್ಲಿದ್ದರೆ ಜನತೆ.
ವಿಶೇಷವೆಂದರೆ ಆನೆಗಳ ನರಬೇಟೆಗೆ ಜಿಲ್ಲಾಡಳಿತ ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಗಳು ಕಾರಣ ಎಂಬ ಆರೋಪ ವ್ಯಕ್ತವಾಗಿರುವುದು.


ಪಾದಚಾರಿಗಳು ನಡೆದು ಹೋಗುವ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಗಣೇಶನ ದೇವಸ್ಥಾನಗಳನ್ನು ಜಿಲ್ಲಾಡಳಿತ ಏಕಾಏಕಿ ಧ್ವಂಸಗೊಳಿಸಿರುವುದರ ಪರಿಣಾಮ ಸಿಟ್ಟಿಗೆದ್ದ ಗಣೇಶ ಆನೆ ರೂಪದಲ್ಲಿ ಬಂದು ಕಾಡಿದ ಎನ್ನುತ್ತಿದ್ದಾರೆ ಸ್ಥಳೀಯ ಕೆಲವು ಆಸ್ತಿಕರು.
ಸುತ್ತಲೆಲ್ಲೂ ಕಾಡೇ ಇರದಿದ್ದರೂ ನಗರಕ್ಕೆ ಕಾಡಾನೆಗಳು ನುಗ್ಗಿರುವುದು, ಅರವಳಿಕೆ ಮೇಲೆ ಅರವಳಿಕೆ ಚಚ್ಚು ಮದ್ದು ನೀಡಿದರೂ ಕ್ಯಾರೇ ಮಾಡದ ಆನೆಗಳನ್ನು ಕಂಡ ಜನತೆ ಈ ವಿಚಾರ ಇದ್ದರೂ ಇರಬಹುದು ಅನ್ನುತ್ತಿದ್ದರಂತೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ