ಬುಧವಾರ, ಜೂನ್ 8, 2011

ಸ್ವಿಸ್ ಬ್ಯಾಂಕ್ ನಿಂದ್ಲೂ ಹಣ ತರಬಹುದಂತೆ...!


ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ತೆರಿಗೆ ಕಳ್ಳರು ಎಲ್ಲಿದ್ದಾರೆ ಎಂದು ಕೇಳಿದರೆ ತೋರು ಬೆರಳು ಭಾರತದತ್ತ ತಿರುಗಿಸುತ್ತದೆ ಸ್ವಿಸ್ ಬ್ಯಾಂಕ್ ಗಳು!
2006ರ ಅಂಕಿ ಅಂಶಗಳ ಪ್ರಕಾಶ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿದ್ದ ಹಣದ ಪ್ರಮಾಣ 1.4 ಲಕ್ಷ ಕೋಟಿ ಡಾಲರ್. 2008ರಲ್ಲಿ ಅದರ ಪ್ರಮಾಣ 1,891 ಶತ ಕೋಟಿ ಡಾಲರ್!
ಇಂದು ದೇಶದಾದ್ಯಂತ 'ಕಪ್ಪು ಹಣ' ಭಾರೀ ಸದ್ದು ಮಾಡುತ್ತಿದೆ. ಸ್ವಿಸ್ ಬ್ಯಾಂಕ್ ಗಳಲ್ಲಿ ಕೂಡಿಟ್ಟಿರುವ ಭಾರತೀಯ ಹಣ ಸ್ವದೇಶಕ್ಕೆ ವಾಪಸ್ ತರಬೇಕೆನ್ನುವ ಕೂಗು ಮುಗಿಲು ಮಟ್ಟಿದೆ. ಬಾಬಾ ರಾಮದೇವರಂತವರು ಇದಕ್ಕೆ ತೊಡೆತಟ್ಟಿ ನಿಂತಿದೆ. ಒಟ್ಟಿನಲ್ಲಿ ದೇಶದಲ್ಲಿ ಹೊಸ ಸಂಚಲನ ಮೂಡಿಸಿರುವ 'ಕಪ್ಪು ಹಣ' ಮತ್ತೆ ವಾಪಸ್ಸು ತರಬಹುದಾ?
ಖಂಡಿತಾ ತರಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು. ಸ್ವಿಸ್ ಬ್ಯಾಂಕ್ ಗಳು ತಮ್ಮ ಗ್ರಾಹಕನ ಗೌಪ್ಯತೆ ಕಾಪಾಡಿ ಕೊಳ್ಳುವುದು ನಿಜವಾದರೂ ಮಾದಕ ವಸ್ತು ಕಳ್ಳ ಸಾಗಾಣಿ, ಹವಾಲಾ, ತೆರಿಗೆ ಕಳವು, ಭಯೋತ್ಪಾದನೆ ದಿವಾಳಿ ಮೊದಲಾದ ಪ್ರಕರಣಗಳಲ್ಲಿ ವ್ಯಕ್ತಿಯ ಆರೋಪ ಋಜುವಾತಾದರೆ ದಾಖಲೆ ಸಮೇತ ತಮ್ಮ ಅಕೌಂಟ್ ದಾರನ ರಹಸ್ಯ ಬಹಿರಂಗ ಗೊಳಿಸುತ್ತದೆ. ಇದಕ್ಕೆ ಎರಡನೇ ಮಹಾಯುದ್ಧದಲ್ಲಿ ಅಮೆರಿಕಾ, ಪ್ರಾನ್ಸ್, ಬ್ರಿಟನ್ ಗೆ ನಾಜಿ ವಿವಾದದಿಂದ ಪಾರಾಗಲು, ಸೆಪ್ಟಂಬರ್ 9,11 ದಾಳಿ ಬಳಿಕ ಒಸಾಮಾ ಬಿನ್ ಲಾಡೆನ್ ಇಟ್ಟ ಹಣ ಮುಟ್ಟುಗೋಲು ಹಾಕಲು ಅವಕಾಶ ಮಾಡಿದ್ದನ್ನು ಉದಾಹರಿಸಬಹುದು ಎನ್ನುತ್ತಾರೆ ಅವರು.
ಹೀಗಾಗಿ ದೇಶದಲ್ಲಿ ಆರಂಭಗೊಂಡಿರುವ ಜನಾಂದೋಲನಕ್ಕೆ ಹೊಸ ಖದರ್ ಬರುವ ಸಾಧ್ಯತೆಯಿದೆ.
ಒಂದು ವೇಳೆ ತೆರಿಗೆ ಕಳ್ಳರ ಸ್ವರ್ಗವಾಗಿರುವ ಸ್ವಿಸ್ ಬ್ಯಾಂಕ್ ಅನಿವಾರ್ಯವಾಗಿ ತನ್ನ ಭಾರತೀಯ ಖಾತೆದಾರರ ಹೆಸರು ಬಹಿರಂಗಗೊಳಿಸಬೇಕಾಗಿ ಬಂದಲ್ಲಿ ಅದ್ಯಾವ ಮುಖವಾಡಗಳೆಲ್ಲ ಕಳಚಿ ಬೀಳಲಿದೆಯೋ... ಅದ್ಯಾರೆಲ್ಲ ದೇಶದ ಜನತೆಯ ಮುಂದೆ ಬೆತ್ತಲಾಗಲಿದ್ದಾರೋ... ಕಾಲವೇ ಹೇಳಬೇಕು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ