ಭಾನುವಾರ, ಜೂನ್ 19, 2011

ತೀವ್ರಗೊಂಡ ಕಡಲ್ಕೊರೆತ


ಕಡಲ್ಕೊರೆತದ ತೀವ್ರತೆಗೆ ಇಲ್ಲಿನ ಉದ್ಯಾವರ, ಪಡುಕೆರೆ ಹಾಗೂ ಕನಕೋಡ ಕಡಲತೀರಗಳು ತತ್ತರಿಸಿ ಹೋಗುತ್ತಿದ್ದು, ಇಲ್ಲಿನ ಮೀನುಗಾರಿಕಾ ಕಾಂಕ್ರೀಟ್ ರಸ್ತೆಗೆ ಸಮುದ್ರಪಾಲಾಗುವ ಭೀತಿ ಎದುರಾಗಿದೆ.
ಇಲ್ಲಿನ ಕಡಲ ತೀರದಿಂದ ಸುಮಾರು ಮೂರು ಕಿಲೋಮೀಟರ್ ದೂರದವರೆಗೂ ಕಡಲ ಘರ್ಜನೆ ಕೇಳಿ ಬರುತ್ತಿದೆ. ದಡ‌ಕ್ಕೆ ಅಪ್ಪಳಿಸುತ್ತಿರುವ ಭಾರೀ ಅಲೆಗಳಿಗೆ ಈ ಹಿಂದೆ ಹಾಕಲಾಗಿದ್ದ ಮರಳ ಚೀಲಗಳು, ಕಲ್ಲುಗಳನ್ನು ಆಹುತಿ ಪಡೆದುಕೊಳ್ಳುತ್ತಿದೆ.
ಕಡಲ ಅಬ್ಬರಕ್ಕೆ ಪಡುಕೆರೆಯ ಮೀನುಗಾರಿಕಾ ಕಾಂಕ್ರೀಟ್ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ, ತೆಂಗಿನ ಮರ ಹಾಗೂ ಕನಕೋಡ ಭಜನಾ ಮಂದಿರದ ಬಳಿ ಇರುವ ತೆಂಗಿನ ಮರಗಳು ಅಪಾಯ ಎದುರಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ