ದುಡಿತದ ನಡುವಲ್ಲೂ ಗೆಲುವು ಕಂಡ ಯುವಕ!
ಸಾಧಿಸುವ ಛಲವೊಂದಿದ್ದರೆ ಸಾಕು, ಸಾಧನೆಗೆ ಯಾವುದೂ ಅಡ್ಡಿಯಾಗದು.
ಈ ಮಾತನ್ನು ಅಕ್ಷರಶಃ ಸತ್ಯ ಎಂದು ನಿರೂಪಿಸಿರುವುದು ಪಡುಬಿದ್ರೆಯ ಬಳ್ಕುಂಜೆ ಫಲಿಮಾರು ಕಾರ್ನಿರೆ ಗ್ರಾಮದ ಯುವಕ ನಾಸಿರ್!
ಉಡುಪಿಯ ಚೈನೀಸ್ ರೆಸ್ಟೊರೆಂಟ್ ವೊಂದರಲ್ಲಿ ಅಡುಗೆಯವನಾಗಿ ದುಡಿಯುತ್ತಲೇ ಈತ ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 79 ಶೇಕಡಾ ಅಂಕ ಗಳಿಸಿ ಸಾಧನೆ ತೋರಿದ್ದಾನೆ.
ದಿವಂಗತ ಶೇಖಬ್ಬ ಹಾಗೂ ಜುಬೈದ ದಂಪತಿ ಪುತ್ರನಾಗಿರುವ ನಾಸಿರ್ ಏಳನೇ ತರಗತಿ ಓದುತ್ತಿರುವಾಗ ತಂದೆಯ ನಿಧನದಿಂದಾಗಿ ಶಾಲೆ ತೊರೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಬಳಿಕ ನಾಸಿರ್ ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಹೋಗಿದ್ದು ಭಟ್ಕಳದ ತೋಟಗಾರಿಕಾ ಫಾರ್ಮ್ ವೊಂದಕ್ಕೆ.
ವಿದ್ಯೆ ಮೇಲಿದ್ದ ನಾಸಿರ್ ನ ಒಲವು ಕಂಡ ಫಾರ್ಮ್ ಮಾಲೀಕರು ಅಲ್ಲಿನ ಶಾಲೆಯೊಂದರಲ್ಲಿ ಆತನ ಕಲಿಕೆಗೆ ಏರ್ಪಾಡು ಮಾಡಿದ್ದರು. ಬೆಳಿಗ್ಗೆಯಿಂದ ಸಂಜೆ ತನಕ ಶಾಲೆಯಲ್ಲಿ ಕಲಿಯುತ್ತಿದ್ದ ನಾಸಿರ್ ಸಂಜೆಯ ಬಳಿಕ ಫಾರ್ಮ್ ನಲ್ಲಿ ಉದ್ಯೋಗ ಮಾಡುತ್ತಿದ್ದ. ಆದರೆ ಈ ನಡುವೆ ಮನೆಯವರ ಕರೆಯಂತೆ ಆತ ಮತ್ತೆ ಊರಿಗೆ ಮರಳಬೇಕಾಯಿತು. ಕುಟುಂಬವನ್ನು ಪೊರೆಯುವ ಜವಾಬ್ದಾರಿ ಹೆಗಲ ಮೇಲಿದ್ದುದರಿಂದ ನಾಸಿರ್ ಅಕ್ಕಪಕ್ಕದ ಹೊಟೇಲ್ ಗಳಲ್ಲಿ ಉದ್ಯೋಗ ಮಾಡುವುದು ಅನಿವಾರ್ಯವಾಯಿತು.
ಬಳಿಕ ಟೆಂಪ್ಟೇಶನ್ ಚೈನೀಸ್ ರೆಸ್ಟೊರೆಂಟ್ ನಲ್ಲಿ ಅಡುಗೆಯವನಾಗಿ ಉದ್ಯೋಗ ಪಡೆದ ನಾಸಿರ್ ಗೆ ಮತ್ತೆ ವಿದ್ಯೆಯತ್ತ ಒಲವು ಮೂಡಿತ್ತು. ಇದರ ಮುಂದುವರಿದ ಹಂತವಾಗಿ ನಾಸಿರ್ ಸ್ನೇಹಾ ಟ್ಯುಟೋರಿಯಲ್ ಮಾಲಕರಾದ ಉಮೇಶ್ ನಾಯಕ್ ಸಹಕಾರದಿಂದ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಕಟ್ಟಿದರು. ಉದ್ಯೋಗದ ನಂತರ ಸಿಗುವ ಬಿಡುವಿನ ವೇಳೆಯಲ್ಲಿ ಉಮೇಶ್ ರಿಂದ ತರಬೇತಿ ಪಡೆದ ನಾಸಿರ್ ಇದೀಗ 474 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ತೋರಿದ್ದಾನೆ.
ಈತನ ಸಾಧನೆಗೆ ತಾಯಿ, ರೆಸ್ಟೊರೆಂಟ್ ಮಾಲಕರಾದ ಸಿರಾಜ್, ಪುರಂದರ್ ಕೂಡಾ ಬೆಂಬಲ ನೀಡಿದ್ದರು.
ಮುಂದೆ ಪಿಯುಸಿ ಬರೆದು ಬಿಕಾಂ ಮಾಡುವ ಗುರಿ ಹೊಂದಿರುವ ನಾಸಿರ್, ಸಕಲ ಸವಲತ್ತು ಒದಗಿಸಿಯೂ ವಿದ್ಯೆ ಕಲಿಯಲು ಹಿಂದೆ ಮುಂದೆ ನೋಡುವ ಮಂದಿಗೆ ನಿಜಕ್ಕೂ ಮಾದರಿಯಾಗಿದ್ದಾನೆ!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ