ಗೆಳೆಯನ ನೆನಪಿಗೆ ರಂಗಮಂದಿರ ನಿರ್ಮಿಸಿದರು...
ಕೆಂಜಾರಿನ ವಿಮಾನ ದುರಂತದಲ್ಲಿ ಮಡಿದವರ ಪೈಕಿ ಉಡುಪಿ ಜಿಲ್ಲೆಯ ಕೆಮ್ತೂರಿನ ಜಯಪ್ರಕಾಶ ದೇವಾಡಿಗರೂ ಒಬ್ಬರು. ಅವರು ಆತ್ಮೀಯತೆಯಿಂದ ಎಲ್ಲರಿಗೂ ಜೆ.ಪಿ. ದೇವಾಡಿಗ ಎಂದೇ ಪರಿಚಿತರಾಗಿದ್ದರು.
ಆತ್ಮೀಯತೆ ತೋರೋಣವೆಂದರೆ ಇಂದು ಭೌತಿಕವಾಗಿ ಅವರು ನಮ್ಮೊಡನೆ ಇಲ್ಲ. ಆದರೆ ಅವರನ್ನು ನೆನಪುಗಳಲ್ಲಿ ಸದಾ ಹಿಡಿದಿಟ್ಟುಕೊಳ್ಳುವ ಕಾರ್ಯವನ್ನು ಅವರ ಗೆಳೆಯರು, ಆತ್ಮೀಯರು ಮಾಡಿದ್ದಾರೆ.
ತಮ್ಮ ಪ್ರೀತಿಯ ಗೆಳೆಯನ ನೆನಪಿನಲ್ಲಿ ಪಡುಮಾರ್ನಾಡಿನ ಯುವಕ ಮಂಡಲ ಹಾಗೂ ಪ್ರಜ್ಞಾ ಯುವತಿ ಮಂಡಲಿ ನೇತೃತ್ವದಲ್ಲಿ ಅಮನೊಟ್ಟು ಬಾಕ್ಯಾರ್ ನಲ್ಲಿ ಸರಿಸುಮಾರು 3.55 ಲಕ್ಷ ರೂ. ವೆಚ್ಚದಲ್ಲಿ ರಂಗ ಮಂದಿರವೊಂದನ್ನು ನಿರ್ಮಿಸಿದೆ. ಜಯಪ್ರಕಾಶ್ ರ ಪುಣ್ಯತಿಥಿಯಾದ ಇಂದು (ಮೇ 22) ಈ ರಂಗಮಂದಿರ ಲೋಕಾರ್ಪಣೆಗೊಳ್ಳಲಿದೆ.
ಕ್ರಿಯಾಶೀಲರಾಗಿದ್ದ ಜಯಪ್ರಕಾಶ್ ಜನಿಸಿದ್ದು ಉಡುಪಿಯ ಕೆಮ್ತೂರಿನಲ್ಲಿ. ಇಲ್ಲಿ ಪಡುಮಾರ್ನಾಡಿನ ತನ್ನ ಅಕ್ಕನ ಮನೆಯಿಂದ ಶಾಲೆಗೆ ಹೋಗುತ್ತಿದ್ದ ಅವರು ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಮೂಡಬಿದಿರೆಯ ಧವಳಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಮೂಡಿಬಂದಿದ್ದರು. ಜಿಲ್ಲೆಯಲ್ಲಿ ನಿರ್ಮಾಣಗೊಂಡ 'ಸುದ್ದ' ಕಿರು ಚಲನಚಿತ್ರದಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದರು. ಪಡುಮಾರ್ನಾಡು ಯುವಕ ಮಂಡಲದಲ್ಲಿ ಎಂಟು ವರ್ಷ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಜೇಪಿ ಸೇವೆ ಸಲ್ಲಿಸಿದ್ದಾರೆ.
ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ, ಎಲ್ಲರಿಗೂ ಬೇಕಾಗಿದ್ದ ಜೇಪಿ ವಿದೇಶದಲ್ಲಿ ಉದ್ಯೋಗ ಪಡೆದು ಮದುವೆ ಯೋಚನೆಯೊಂದಿಗೆ ಅಂದು ಊರಿಗೆ ಮರಳುತ್ತಿದ್ದರು. ಅಂತಕನ ದೂತರಿಗೆ ಕಿಂಚಿತ್ತೂ ದಯೆ ಇಲ್ಲ... ಎಂಬಂತೆ ವಿಧಿಯ ಕ್ರೂರತೆಗೆ ಪ್ರಾಣ ಅರ್ಪಿಸಿದರು.
ಗೆಳೆಯನಿಗಾಗಿ ಭಗೀರಥ ಯತ್ನ
ಪ್ರೀತಿಯ ಗೆಳೆಯನ ಅಗಲುವಿಕೆಯ ನೋವು ಅನುಭವಿಸುತ್ತಲೇ ಆತನ ನೆನಪು ಶಾಶ್ವತವಾಗಿ ಉಳಿಸಲು ಯೋಜನೆ ರೂಪಿಸಿದವರು ಪಡುಮಾರ್ನಾಡಿನ ಯುವಕ ಮಂಡಲ ಹಾಗೂ ಪ್ರಜ್ಞಾ ಯುವತಿ ಮಂಡಲದ ಸದಸ್ಯರು.
ಕೇವಲ ಒಂದೇ ವರ್ಷದ ಅವಧಿಯಲ್ಲಿ ಇವರು ಸುಮಾರು 3.55 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿರುವುದು ಸಾಮಾನ್ಯ ವಿಚಾರವೇನಲ್ಲ.
ಇವರ ಈ ಕೆಲಸಕ್ಕೆ ದುರಂತ ಪರಿಹಾರ ನಿಧಿಯಲ್ಲಿ ದೊರೆತ ಪರಿಹಾರ ಹಣದಿಂದ ಜೇಪಿ ಹಿರಿಯ ಸಹೋದರಿ ಸರೋಜಿನಿ ಮುದ್ದು ಮೋಯ್ಲಿ, ಹಿರಿಯ ಸಹೋದರ ಕೃಷ್ಣ ಸೇರಿಗಾರ, ಪ್ರಭಾಕರ ದೇವಾಡಿಗ ಹಾಗೂ ಇತರ ಸಹೋದರ, ಸಹೋದರಿಯರೂ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿದ್ದಾರೆ.
ಗೆಳೆಯನ ಕಾಯ ಮಣ್ಣಲ್ಲಿ ಸೇರಿಹೋದರೂ, ಹೃದಯದಿಂದ ದೂರಾಗದಂತೆ ನೋಡಿಕೊಂಡ ಇವರ ಸಾಧನೆ ನಿಜಕ್ಕೂ ಇತರರಿಗೆ ಮಾದರಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ