ಶನಿವಾರ, ಮೇ 21, 2011

ಸಿವಿಆರ್ ಹೇಳಿದ್ದು...

ದುಬೈ-ಮಂಗಳೂರು ನಡುವಿನ ಪ್ರಯಾಣದ ಅವಧಿ ಕೇವಲ ಎರಡು ತಾಸುಗಳಷ್ಟು.
ಅಂದು ಮೇ 22, ಶನಿವಾರ. ಬೆಳಗೆ 6 ಗಂಟೆ 3 ನಿಮಿಷ ಸುಮಾರಿಗೆ ಕೆಂಜಾರಿನ ಆಗಸ ತಲುಪಿಕೊಂಡಿದ್ದ ಏರ್ ಇಂಡಿಯಾದ ಈ ನತದೃಷ್ಟ ವಿಮಾನವನ್ನು ಅನುಭವೀ ಕ್ಯಾಪ್ಟನ್ ಗ್ಲೂಸಿಕಾಗೆ ಕೊನೆಗೂ ಸುರಕ್ಷಿತವಾಗಿ ಇಳಿಸಲಾಗಲೇ ಇಲ್ಲ...
ದುರಂತ ಘಟಿಸಿದ ಕೆಲವು ದಿನಗಳ ಬಳಿಕ ಸಿಕ್ಕ ಬ್ಲ್ಯಾಕ್ ಬಾಕ್ಸ್ ಕೊನೆಯ ಕ್ಷಣದಲ್ಲಿ ವಿಮಾನದ ಕಾಕ್ ಪಿಟ್ ನಲ್ಲಿ ನಡೆದ ಸಂಭಾಷಣೆಯನ್ನು ಹೊರಗೆಡವಿ ದುರಂತಕ್ಕೆ ಕಾರಣವಾದ ಸ್ಪಷ್ಟ ಚಿತ್ರಣ ನೀಡಿತ್ತು.


.


ಬೆಳಗ್ಗೆ ಸರಿಯಾಗಿ 6.03.42 ಕ್ಕೆ ರನ್ ವೇ ಮೇಲಕ್ಕೆ ತಲುಪಿದ್ದ ವಿಮಾನ 6.05ರ ವೇಳೆಗೆ ಪತನಗೊಂಡಿತ್ತು. ಕಾಕ್ ಪೀಟ್ ವಾಯ್ಸ್ ರೆಕಾರ್ಡರ್ ವಿಮಾನದ ಪ್ರಯಾಣದ ಅವಧಿಯಾದ ಎರಡು ಗಂಟೆ ಐದು ನಿಮಿಷಗಳಲ್ಲಿ ಒಂದು ಗಂಟೆ ನಲ್ವತ್ತು ನಿಮಿಷಗಳ ಕಾಲ ಕ್ಯಾಪ್ಟನ್ ಗ್ಲುಸಿಕಾ ನಿದ್ದೆಯಲ್ಲೇ ಕಳೆದಿದ್ದರು ಎಂಬ ಆಘಾತಕಾರಿ ಅಂಶ ಹೇಳಿದೆ.


ವಿಮಾನ ಇಳಿಸುವುದು ಬೇಡ ಎಂದು ಸಹ ಪೈಲೆಟ್ ಪದೇ ಪದೇ ಹೇಳಿದ್ದರೂ ಗ್ಲುಸಿಕಾ ಆ ಸಲಹೆಯನ್ನು ತಳ್ಳಿ ಹಾಕಿದ್ದರು.
ಅದರ ಪರಿಣಾಮ ಮಾತ್ರ ಮುಂದಿನ ಕೆಲವೇ ಕ್ಷಣದಲ್ಲಿ ಎಂದಿಗೂ ಮರೆಯಲಾಗದ ಕಹಿ ನೆನಪಾಗಿ ದಾಖಲಾಗಿ ಹೋಗಿದೆ...
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ