ಒಂದು ಕಾಲಕ್ಕೆ ಪುತ್ತೂರಿನ ಅಭಿವೃದ್ಧಿಗಾಗಿ ಸ್ಥಳೀಯ ಯವಕರನ್ನೆಲ್ಲ ಸಂಘಟಿಸಿ ಸದಾ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದ ಸದಾನಂದ ಗೌಡರು ಇಂದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ್ದಿದ್ದಾರೆ.
ಇನ್ನಾದರೂ ಮಾಣಿ-ಮೈಸೂರು ನಡುವಿನ ರಾಜ್ಯಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಸಾಧ್ಯವಾದೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಜನತೆ.
ಮಾಣಿಯಿಂದ ಸಂಪಾಜೆವರೆಗೆ ದ್ವಿಪಥ ರಸ್ತೆ ಕಾಮಗಾರಿಗೆ 2010ರಲ್ಲಿ 176 ಕೋಟಿ ರೂ. ವೆಚ್ಚದಲ್ಲಿ ಚಾಲನೆ ದೊರೆತಿದೆ. ಈ ಕಾಮಗಾರಿ ಬಹಳಷ್ಟು ಮಂದಗತಿಯಲ್ಲಿ ಸಾಗತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು, ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದಾಗ ಶೀಘ್ರವೇ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ತಾತ್ಕಲಿಕ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯಷ್ಟೇ ಉಳಿದಿದೆ ಎನ್ನುತ್ತಾರೆ ಸ್ಥಳೀಯರು.
ಸುಮಾರು 71 ಕಿ.ಮೀ. ಉದ್ದದ ರಸ್ತೆಯನ್ನು 12 ಮೀಟರ್ ಅಗಲಗೊಳಿಸಿ ಎರಡೂ ಬದಿ 2.5 ರ ಅಂತರದಲ್ಲಿ ಮಣ್ಣಿನ ರಸ್ತೆ ಹಾಗೂ 7 ಮೀ. ರಸ್ತೆ ಡಾಮರೀಕರಣಗೊಳಿಸಲಾಗುವುದು. ಆದರೆ ಸದ್ಯಕ್ಕೆ ಜಲ್ಲಿಯ ಕೊರೆತೆಯಿದೆ. ಹಾಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುವುದು ಇಲಾಖೆಯು ನೀಡುತ್ತಿರುವ ಕಾರಣ. ಆದರೆ ಮಳೆ ನಿಲ್ಲಲಿ, ಶೀಘ್ರವೇ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಈಗಾಗಲೇ ಈ ರಸ್ತೆಯಲ್ಲಿ ಸಂಚರಿಸುತ್ತಾ ಬಸವಳಿದು ಹೈರಾಣಾಗಿರುವ ಜನರಿಗೆ ಮಾತ್ರ ಈ ರಸ್ತೆ ಶೀಘ್ರ ಸಂಚಾರ ಯೋಗ್ಯವಾಗುತ್ತದೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಈ ನಡುವೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಲು ಮುಖ್ಯಮಂತ್ರಿ ಸದಾನಂದ ಗೌಡರು ಬರುತ್ತಿದ್ದಾರೆ. ಪುತ್ತೂರಿನ ಮುತ್ತು ಗೌಡರ ಆಗಮನದ ವೇಳೆ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಲು ಸ್ಥಳೀಯರು ಸಿದ್ಧತೆ ನಡೆಸಿದ್ದಾರೆ.
ಅಲ್ಲದೆ ತಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುತ್ತಾರೆ ಎಂಬ ಭರವಸೆಯೂ ಅವರಿಗಿದೆ. ಯಾಕೆಂದರೆ ಇದುವರೆಗೆ ರಾಜ್ಯದ ಮುಖ್ಯಮಂತ್ರಿಯವರಲ್ಲಿ ಬಹುಪಾಲು ಮಂದಿ ಅಧಿಕಾರಾವಧಿಯಲ್ಲಿ ತಮ್ಮ ಜಿಲ್ಲೆಯ ಅಭಿವೃದ್ಧಿಯನ್ನೇ ಮೊದಲು ಆದ್ಯತೆಯಾಗಿರಿಸಿದ್ದರು.ಉಳಿದೆಲ್ಲಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆಯಾಗುವಂತೆ ನೋಡಿಕೊಂಡು ಅಭಿವೃದ್ಧಿಗೆ ಶ್ರಮಿಸಿದ್ದರು ಎನ್ನಬಹುದು. ಇದೀಗ ಗೌಡರು ಮುಖ್ಯಮಂತ್ರಿಯಾದಾಗಲೂ ಹಾಗೆಯೇ, ದ.ಕ. ಜಿಲ್ಲೆಯ ಮಟ್ಟಿಗೂ ಅಭಿವೃದ್ಧಿಯ ಸೌಭಾಗ್ಯ ದಕ್ಕೀತು ಎಂಬ ನಿರೀಕ್ಷೆಯಲ್ಲಿದ್ದಾರೆ ಜನತೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ