ಇದು ಕುಂದಾಪುರ ತಾಲೂಕಿನ ಮಡಾಮಕ್ಕಿಯ ಕಬ್ಬಿನಾಲೆಯಲ್ಲಿ ಜೀವಿಸುತ್ತಿರುವ ಕುಟುಂಬವೊಂದರ ನೋವಿನ ಕಥೆ.
ಇಲ್ಲಿನ ಶ್ರೀಧರ ನಾಯ್ಕ್ ಹಾಗೂ ಅವರ ಸಹೋದರ ಮಕ್ಕಳು ಬಹು ಅಪರೂಪದ ಕಾಯಿಲೆ ಎಂದು ಹೇಳಲಾದ ದೇಹದಲ್ಲಿ ಲವಣಾಂಶ ಕೊರತೆ ಸಮಸ್ಯೆಯಲ್ಲಿ ಬಳಲುತ್ತಿದ್ದು, ಮಕ್ಕಳ ಬದುಕಿಗಾಗಿ ಜೀವನ ಪಣಕ್ಕಿಟ್ಟಿರುವ ಕಬ್ಬಿನಾಲೆಯ ಈ ಬಡ ಕುಟುಂಬದ ಬದುಕು ನಾಲೆಗೆ ಸಿಕ್ಕ ಕಬ್ಬಿನಂತಾಗಿದೆ.
ಕಬ್ಬಿನಾಲೆಯ ಶ್ರೀಧರ ನಾಯ್ಕ್ ಅವರ ಪುತ್ರ ಪ್ರಜ್ವಲ್ (8) ಗೆ ಹುಟ್ಟಿದಾಗಿನಿಂದ ಪದೇ ಪದೇ ವಾಂತಿಯಾಗುತ್ತಿತ್ತು. ಜೊತೆಗೆ ಭೇದಿಯೂ.ಈ ಬಗ್ಗೆ ಹಲವು ಆಸ್ಪತ್ರೆಗಳಿಲ್ಲ ಚಿಕಿತ್ಸೆ ಕೊಡಿಸಲಾಯಿತಾದರೂ ಕಾಯಿಲೆ ಮಾತ್ರ ಯಾವುದೆಂದೇ ಪತ್ತೆಯಾಗಲಿಲ್ಲ.
ಆದರೆ ಧೃತಿಗೆಡುವ ಅವರು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಮಗುವನ್ನು ದಾಖಲಿಸಿದರು. ಮಗುವಿನ ಕುರಿತು ಸಂಪೂರ್ಣ ಪರೀಕ್ಷೆ ನಡೆಸಿದ ಡಾ.ರಾಕೇಶ್ ಅಡಿಗರು ಮಗುವಿಗೆ ಲವಣಾಂಶ ಕೊರತೆಯಿದೆ. ಫಾಲಿಕ್ ಸ್ಟ್ರಾ ಟಾನಿಕ್ ನೀಡಿದರೆ ಕ್ರಮೇಣ ಸರಿಯಾಗುತ್ತಿದೆ ಎಂದಿದ್ದರು ಬಳಿಕ ನಾಲ್ಕು ವರ್ಷಗಳ ಕಾಲ ಈ ಔಷಧಿ ನೀಡಿದ ಬಳಿಕ ಪ್ರಜ್ವಲ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಈಗ ಮಡಾಮಕ್ಕಿ ಬಳಿಯ ಕಾಸನಮಕ್ಕಿ ಶಾಲೆಗೂ ಹೋಗುತ್ತಿದ್ದಾನೆ.
ಆದರೆ ಚಿಕಿತ್ಸೆಗಾಗಿ ಇದುವರೆಗೆ ಲಕ್ಷಾಂತರ ರೂ. ವ್ಯಯಮಾಡಲಾಗಿದೆ. ದುರಂತವೆಂದರೆ ಇದರೊಂದಿಗೆ ಅವರ ಇನ್ನೋರ್ವ ಪುತ್ರಿ ಪ್ರಾರ್ಥನಾ(3) ಸಹೋದರನ ಮಕ್ಕಳಾದ ಪ್ರಗತಿ(5) ಸಾಗರ್ (3) ಅವರು ಕೂಡಾ ಇದೇ ತೊಂದರೆಯಲ್ಲಿ ಬಳಲುತ್ತಿದ್ದಾರೆ.
ಕಿಡ್ನಿಯಲ್ಲಿನ ಡಿ.ಸಿಟಿ ತೊಂದರೆಯಿಂದ ಜಿನ್ ಗಳ ಸಮಸ್ಯೆಯಿಂದ ಅಪರೂಪವೆನಿಸುವ ಈ ಸಮಸ್ಯೆ ಬರುತ್ತದೆ. ಪೊಟಾಷಿಯಂ ಲವಣಾಂಶ ಕೊರತೆಯಿಂದ ಈ ಸಮಸ್ಯೆ ಪ್ರಾರಂಭವಾಗಿದೆ. ಕಿಡ್ನಿಯ ನೀರಿನ ಅಂಶ ಮೂತ್ರನಾಳದಿಂದ ಪುನಃ ವಾಪಾಸಾಗದೇ ಮಗು ದಿಕ್ಕೆ 20 ಕ್ಕೂ ಹೆಚ್ಚುಸಲ ಮೂತ್ರಮಾಡುತ್ತದೆ. ನಮ್ಮ ಆಸ್ಪತ್ರೆಯ ಪ್ರಥಮ ಪ್ರಕರಣವಾಗಿದ್ದು ಇದನ್ನು ರಿಯಾನಲ್ ಟುಬ್ಯಿಲರ್ ಆಸಿಯಾಟ್ ಎನ್ನುತ್ತಾರೆ ಸತತ 10 ವರ್ಷಕ್ಕೂ ಮಿಕಿ ಪೋಲಿಕ್ ಸ್ಟ್ರಾ ಸೇವೆಯಿಂದ ಹಲವು ವರ್ಷಗಳ ನಂತರ ಈ ಸಮಸ್ಯೆಯ ಪರಿಹಾರವಾಗುತ್ತದೆ ಎಂದು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯ ವೈದ್ಯರಾದ ಡಾ.ರಾಕೇಶ ಅಡಿಗ ಪ್ರತಿಕ್ರಿಯಿಸಿದ್ದಾರೆ.
90ಲಕ್ಷಮಿಕ್ಕಿ ವ್ಯಯ...
ಮಡಾಮಕ್ಕಿ ಮಾವನ ಮನೆಯಲ್ಲಿ ವಾಸವಾಗಿರುವ ನಾನು ನನ್ನ ಮಕ್ಕಳ ಚಿಕಿತ್ಸೆಗಾಗಿ 80 ಲಕ್ಷಕ್ಕೂ ಮಿಕ್ಕಿ ವ್ಯಯಿಸಿದ್ದೇನೆ. ತಮ್ಮ ಗಣೇಶ್ 10 ಲಕ್ಷಕ್ಕೂ ಮಿಕ್ಕಿ ಖರ್ಚುಮಾಡಿದ್ದಾನೆ. ನಮ್ಮ 4 ಮಕ್ಕಳಿಗೆ ತಿಂಗಳಿಗೆ 30 ಸಾವಿರ ಔಷಧಿಗೆ ಬೇಕು. ಫೊಲೊಕ್ ಸ್ಟ್ರಾ ಔಷಧವನ್ನು ಪ್ರತಿತಿಂಗಳು ಅಂತ್ಯದಲ್ಲಿ ಮಹಾರಾಷ್ಟ್ರಕ್ಕೆ ಹೋಗಿ ಸ್ವಲ್ಪ ಕಡಿಮೆ ದರದಲ್ಲಿ ಸಿಗುವುದರಿಂದ ತರುತ್ತೇನೆ, ನನ್ನ ಅಣ್ಣ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ನಮ್ಮ ಕುಟುಂಬದ ಮಕ್ಕಳ ಸಮಸ್ಯೆಯಿಂದ ಬೆಂಗಳೂರಿನ ಎರಡು ಸೈಟನ್ನು ಮಾರಾಟ ಮಾಡಿ ಚಿಕಿತ್ಸೆಗೆ ಹಣ ನೀಡಿ ಸಹಕರಿಸಿದ್ದಾನೆ. ನಾನು ಬೆಂಗಳೂರಿನಲ್ಲಿ 20 ವರ್ಷ ಬೇಕರಿಯಲ್ಲಿ ದುಡಿದ ಹಣ ವ್ಯಯಮಾಡಿದ್ದೇನೆ ನಾಲ್ಕೂರಿನ ಭೂಮಿ, ಕಬ್ಬಿನಾಲೆ ಭೂಮಿಯ ಮೇಲೆ ಸಿಗುವಷ್ಟು ಸಾಲ ಮಾಡಿದ್ದೇನೆ ಚಿಕಿತ್ಸೆಸಮಯಕ್ಕೆ ಉಡುಪಿ ಉದ್ಯಮಿ ಪ್ರಮೋದ್ ಮದ್ವರಾಜ್ 30 ಸಾವಿರ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 15 ಸಾವಿರ, ಆಗಿನ ಜಿಲ್ಲಾಧಿಕಾರಿ ಹೇಮಲತಾ 5 ಸಾವಿರ, ಧರ್ಮಸ್ಥಳ ವೀರೇಂದ್ರ ಹೆಗ್ಗಡೆ 2,500, ಮಂದಾರ್ತಿ ದೇವಳದಿಂದ ಸಾವಿರ ಮತ್ತು ಹೆರಿಗೆ ಭತ್ಯೆ 18 ಸಾವಿರ ಸಿಕ್ಕಿದೆ, ನನ್ನ ಬಳಿಯಿದ್ದ ದ್ವಿಚಕ್ರವಾಹನವನ್ನು ಮಾರಾಟ ಮಾಡಿ ಔಷಧಿ ತಂದಿದ್ದೇನೆ. ಆಸ್ಪತ್ರೆ ಬಿಲ್ ಪ್ರತಿಯೊಂದಿಗೆ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೂ ಉಭಯ ಜಿಲ್ಲಾ ಗಣ್ಯರಿಗೂ ಮನವಿ ಸಲ್ಲಿಸಿದ್ದೇನೆ. ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈಗ ಪ್ರತಿ ತಿಂಗಳೂ ನಾನು ಸಹೋದರ ಒಟ್ಟು ಸೇರಿ ಹಣ ಹೊಂದಿಸಿ ಔಷಧಿ ತರುತ್ತೇವೆ ಮುಂದಿನ ಪರಿಸ್ಥಿತಿ ಅರ್ಥವಾಗುತ್ತಿಲ್ಲ ಎಂದು ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಸಹೃದಯಿಗಳು ಸಹಾಯ ನೀಡಲು ಸಿಂಡಿಕೇಟ್ ಬ್ಯಾಂಕ್ ಹೆಬ್ರಿ ಶಾಖೆಯ ಉಳಿತಾಯ ಖಾತೆ 126221001125249, ಸಂಪರ್ಕಕ್ಕಾಗಿ ವಿಳಾಸ:
ಶ್ರೀಧರ ನಾಯ್ಕ್.
ಕಬ್ಬಿನಾಲೆ ಹಾಲಿಮನೆ,
ಅಂಚೆ, ಗ್ರಾಮ ಮಡಾಮಕ್ಕಿ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576212,
ದೂರವಾಣಿ: 9483294338
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ