ಮಂಗಳವಾರ, ಜುಲೈ 5, 2011

ವಿಧಿಯ ಅಟ್ಟಹಾಸ..


ಆತನದ್ದು ಶಾಲೆಗೆ ಹೋಗಬೇಕಾದ ವಯಸ್ಸು. ಆದರೆ ಹೋಗುತ್ತಿಲ್ಲ.
ವಿಧಿ ಆತನಿಗೆ ಎಂಟನೆ ತರಗತಿ ವರೆಗಷ್ಟೇ ಓದಲು ಅವಕಾಶ ನೀಡಿದೆ. ಈಗೇನಿದ್ದರೂ ಆತನದ್ದು ಹಾಸಿಗೆಯಲ್ಲಿ ಮಲಗಿಯೇ ದಿನದೂಡುವ ಪರಿಸ್ಥಿತಿ...
ಇದು ಬೈಲೂರು 76 ಬಡಗುಬೆಟ್ಟು ಗ್ರಾಮದ ರತ್ನಾವತಿ ಶೆಟ್ಟಿಗಾರ್ತಿ ಅವರ ಎರಡನೇ ಮಗ ಸೂರ್ಯಕಾಂತ್ (16)ನ ದಯನೀಯ ಸ್ಥಿತಿ.
ಎಂಟನೇ ತರಗತಿಯವರೆಗೆ ಓದಿರುವ ಈತ ಆಕಸ್ಮಿಕವಾಗಿ ನರ ಪೀಡಿತ ಖಾಯಿಲೆಯೊಂದಕ್ಕೆ ತುತ್ತಾಗಿದ್ದಾನೆ. ಕಳೆದೊಂದು ವರ್ಷದಿಂದ ಮಗನ ಚಿಕಿತ್ಸೆಗಾಗಿ ಮಣಿಪಾಲ, ಉದ್ಯಾವರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾದರೂ ಪ್ರಯೋಜನವಾಗಿಲ್ಲ. ತೀರಾ ಬ‌ಡತನದಲ್ಲೇ ದಿನ ಕಳೆಯುತ್ತಿರುವ ರತ್ನಾವತಿ ಶೆಟ್ಟಿಗಾರ್ತಿ ಕುಟುಂಬಕ್ಕೆ ಪತಿಯ ಆಧಾರವೂ ಇಲ್ಲ. ಕೂಲಿ ಮಾಡಿ ಇಬ್ಬರು ಮಕ್ಕಳನ್ನು ಪೋಷಿಸುತ್ತಿದ್ದಾರೆ. ಸಾಲ ಮಾ‌ಡಿ ಈವರೆಗೆ ಮಗ ಸೂರ್ಯಕಾಂತನಿಗೆ ಔಷಧಿ ಮಾಡಿದ್ದು, ಸದ್ಯಕ್ಕೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವೈದ್ಯರು ಚಿಕಿತ್ಸೆಗೆ 1.5 ಲಕ್ಷ ರೂ. ವೆಚ್ಚವಾಗಬಹುದು ಎಂದಿದ್ದಾರೆ. ಆದರೆ ಈ ಮೊತ್ತ ಒಟ್ಟುಗೂಡಿಸುವುದು ಕುಟುಂಬಕ್ಕೆ ಅಸಾಧ್ಯವಾದ ಮಾತು. ಆದುದರಿಂದ ಈ ಬಡ ಕುಟುಂಬ ಸಹೃದಯಿಗಳ ಸಹಾಯ ಹಸ್ತ ಎದುರು ನೋಡುತ್ತಿದೆ.
ನೆರವು ನೀಡುವವರು ಕಾರ್ಪೋರೇಶನ್ ಬ್ಯಾಂಕ್ ನ ಅಲೆವೂರು ಶಾಖೆ, ರತ್ನಾವತಿ,
ಖಾತೆ ಸಂಖ್ಯೆ 0229/ ಎಸ್ ಬಿ/01/006307 ಗೆ ಜಮೆ ಮಾಡಬಹುದು. ಸಂಪರ್ಕ ಸಂಖ್ಯೆ: 845379633.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ