ಮಂಗಳವಾರ, ಜೂನ್ 21, 2011

'ಮಂಜುನಾಥನ ಮೇಲಾಣೆ'ಗೆ ದಿನಗಣನೆ...


ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನಡುವಿನ 'ಸತ್ಯಪ್ರಮಾಣಕ್ಕೆ' ದಿನಗಣನೆ ಆರಂಭವಾಗಿದೆ.
ಇದೇ ಜೂ.27ರಂದು ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಈ ಇಬ್ಬರೂ ಪ್ರಮಾಣ ಮಾಡಲು ದಿನ ನಿಗದಿಯಾಗಿದ್ದು, ಈ ಇಬ್ಬರು ಪ್ರಮಾಣ ಮಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ಈ ಸಂಗತಿ ರಾಜಕೀಯ ವಾಕ್ಸ ಮರಕ್ಕೆ ಆಹಾರವಾಗಿದೆ.
ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಸಿಎಂ ಸವಾಲನ್ನು ಈಗಾಗಲೇ ಮಾಜಿ ಸಿಎಂ ಸ್ವೀಕಾರ ಮಾಡಿದ್ದಾರೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಸಚಿವ ಶೋಭಾ ಕರಂದ್ಲಾಜೆ ಭಾನುವಾರ ಭೇಟಿ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿತ್ತಲ್ಲದೆ ನಾನಾ ರೀತಿಯ ಸಂಶಯಕ್ಕೂ ಎಡೆಮಾಡಿತ್ತು.
ಆದರೆ ತಮ್ಮದು ಸಾಮಾನ್ಯ ಭೇಟಿಯಷ್ಟೆ ಎಂದು ಅವರು ಸ್ಪಷ್ಟ ಪಡಿಸಿದ್ದರು.
ಒಂದು ಮೂಲದ ಪ್ರಕಾರ ಅಂದು ಯಡಿಯೂರಪ್ಪ ಹಾಗೂ ಕುಮಾರ ಸ್ವಾಮಿ ಕ್ಷೇತ್ರದಲ್ಲಿ ಪ್ರಮಾಣದ ಬದಲಿಗೆ ತಪ್ಪೊಪ್ಪಿಗೆ ಸಲ್ಲಿಸುವ ಸಾಧ್ಯತೇ ಹೆಚ್ಚು. ಯಾಕೆಂದರೆ ರಾಜಕೀಯ ವಿಚಾರಗಳಲ್ಲಿ ಉಂಟಾದ ವೈಮನಸನ್ನು, ಆರೋಪಗಳನ್ನು ಧರ್ಮಸ್ಥಳ ಸನ್ನಿಧಿಯಲ್ಲಿ ಪ್ರಮಾಣದ ಮೂಲಕ ಇತ್ಯರ್ಥ ಪಡಿಸುತ್ತಿರುವ ಪ್ರಕರಣ ಇದೇ ಮೊದಲು. ಹಾಗಾಗಿ ಇನ್ನು ಮುಂದೆ ಈ ರೀತಿಯ ಪ್ರಮಾಣದ ಮಾತುಗಳನ್ನಾಡುವುದಿಲ್ಲ ಎಂದು ತಪ್ಪು ಕಾಣಿಕೆ ನೀಡುವ ಸಾಧ್ಯತೆಗಳೂ ಇವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ನಡುವೆ 'ಆಣೆ ಪ್ರಮಾಣ' ಗಳ ಹೊಸಬೆಳವಣಿಗೆ ಕುರಿತು ವ್ಯಾಪಕ ಪರ-ವಿರೋಧಗಳು ವ್ಯಕ್ತವಾಗಿದೆ.
ಈ ನಾಯಕರಿಬ್ಬರ ಹೇಳಿಕೆಗಳನ್ನು ಗಮನಿಸಿದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವ ವಿಚಾರದಿಂದ ಹಿಂದಕ್ಕೆ ಸರಿಯುವ ಲಕ್ಷಣಗಳೂ ಕಾಣುತ್ತಿಲ್ಲ.
ಈ ನಡುವೆ ಕ್ಷೇತ್ರಕ್ಕೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲವಾಗಿದ್ದು, ಒಂದು ವೇಳೆ ಬಂದರೂ ಎಲ್ಲರಂತೆ ಭಕ್ತ ಹಾಗೂ ದೇವರ ನಡುವಿನ ಸಂಬಂಧದಂತೆ ಪ್ರಮಾಣಕ್ಕೆ ವ್ಯವಸ್ಥೆ ಮಾಡಿ ಕೊಡಲಾಗುವುದು ಅಲ್ಲದೆ ನ್ಯಾಯ ತೀರ್ಮಾನ ನಮ್ಮ ಕೆಲಸವಲ್ಲ. ಪ್ರಮಾಣಕ್ಕೆ ಸಾಕ್ಷಿಗಳಷ್ಟೇ ನಾವು ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ