ಕರ್ತವ್ಯಕ್ಕೆ ಜೀವತೆತ್ತ ಪತ್ರಕರ್ತರ ಸಾಲಿಗೆ ಜೋತಿರ್ಮಯ ಡೇ ಇನ್ನೊಂದು ಹೆಸರಾಗಿ ಸೇರಿಹೋಗಿದ್ದಾರೆ.
ಈ ಮೂಲಕ ತನಿಖಾ ಪತ್ರಕರ್ತರ ಬದುಕು ಕ್ಷಣ ಕ್ಷಣವೂ ಅಪಾಯದ ತೂಗುಕತ್ತಿಯ ಕೆಳಗೇ ಇರುತ್ತದೆ ಮತ್ತು ಹೆಜ್ಜೆ ಜಾರಿದರೆ ಪ್ರಾಣಕ್ಕೇ ಕುತ್ತು ತರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಭೂಗತ ಜಗತ್ತಿನ ಕುರಿತು 'ಖಲ್ಲಾಸ್' 'ಜೀರೋಡಯಲ್' ಎಂಬ ಕೃತಿಗಳನ್ನು ನೀಡಿದ ಜೇ.ಡೆಗೆ ಕೇವಲ ಐವತ್ತಾರಷ್ಟೇ ವಯಸ್ಸು.
ಪತ್ರಿಕೋದ್ಯಮವೆನ್ನುವುದೇ ಹಾಗೆ.
ಅಷ್ಟೆಲ್ಲಾ ಸಲೀಸಾಗಿ ಒಲಿಯುವ ಕ್ಷೇತ್ರವಲ್ಲ. ಅದು ಶ್ರದ್ಧೆ ಬೇಡುತ್ತದೆ, ಪರಿಶ್ರಮ ಬೇಡುತ್ತದೆ, ಊಟ ನಿದ್ದೆ ಮನೆ ಮಠ ಬಿಟ್ಟು ಕೆಲಸ ಮಾಡುವೆಯಾ? ಎಂದು ಕೇಳುತ್ತದೆ. ಎಲ್ಲಾದಕ್ಕೂ ಒಪ್ಪಿಕೊಂಡರೆ ಮಾತ್ರ ಒಳಕ್ಕೆ ಬಿಟ್ಟುಕೊಳ್ಳುತ್ತದೆ. ಇಲ್ಲವಾದರೆ ನೋ.
ಅದರಲ್ಲೂ ಕ್ರೈ ರಿಪೋರ್ಟರ್ ಅಥವಾ ತನಿಖಾ ವರದಿಗಾರನಾಗಿ ಕೆಲಸ ಮಾಡುವುದೆಂದರೆ ಕತ್ತಿ ಮೇಲೆ ನಡೆದಂತೆ. ಸದಾ ಒಂದಲ್ಲಾ ಒಂದು ಅಪಾಯ ಮೈ ಮೇಲೆ ಎಳೆದುಕೊಳ್ಳಲೇಬೇಕು. ಸುದ್ದಿ ಬರೆಯಬೇಕೆಂದರೆ ಅದು ಅನಿವಾರ್ಯವೂ ಹೌದು.
ಸಾಮಾನ್ಯವಾಗಿ ಈ ಅಪರಾಧ ಪ್ರಕರಣಗಳ ವರದಿಗಳು ಪೊಲೀಸರ ಹೇಳಿಕೆಗಳ ಆಧಾರ ಅಥವಾ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಗಳ ಆಧಾರದಲ್ಲಿ ತಯಾರಾಗುತ್ತವೆ. ಆದ್ದರಿಂದ ಇದು ಕೇವಲ ಪೊಲೀಸರ ದೃಷ್ಟಿಕೋನವನ್ನಷ್ಟೇ ಹೊಂದಿರುತ್ತದಲ್ಲದೆ ಅವರ ಮೂಗಿನ ನೇರಕ್ಕೆ ಕಂಡ ಸುದ್ದಿಯಾಗಿ ಮಾತ್ರ ಇರುತ್ತದೆ.
ಆದರೆ ಒಬ್ಬ ಜೇ.ಡೆ. ಮಾತ್ರ ಇದಕ್ಕೆ ಹೊರತಾಗಿದ್ದರು. ಯಾಕೆಂದರೆ ಸುದ್ದಿ ಅದೆಲ್ಲೇ ಇದ್ದರೂ ಅದನ್ನು ಹುಡುಕಿ ತೆಗೆಯುವ ಚಾಕಚಕ್ಯತೆ ಅವರಲ್ಲಿತ್ತು. ಅಪರಾಧ ಜಗತ್ತಿನ ಆಳ ಅಗಲ ಅರಿತಿದ್ದರಿಂದ ಅದೆಷ್ಟೋ ಸುದ್ದಿಯಾಗದೆ ಉಳಿದ ನಿಗೂಢತೆಯನ್ನೂ ಹುಡುಕಿ ತೆಗೆದು ಹೊರಪ್ರಪಂಚಕ್ಕೆ ಬಿಡಿಸಿಬಿಟ್ಟಿದ್ದರು. ತನ್ನ ವರದಿಗಾರಿಕೆ ಶೈಲಿಯಿಂದಲೇ ಇತರ ತನಿಖಾ ವರದಿಗಾರರಿಗೆ ಮಾದರಿಯಾಗಿದ್ದವರು. ಇತ್ತೀಚೆಗಷ್ಟೇ ತೈಲ ಮಾಫಿಯಾದ ಕುರಿತು ಅವರು ವರದಿಯೊಂದನ್ನು ಪ್ರಕಟಿಸಿದ್ದರು. ಈ ವರದಿ ಪ್ರಕಟಿಸದಂತೆ ಅವರ ಮೇಲೆ ಒತ್ತಡವೂ ಇತ್ತು. ಆದರೆ ಕರ್ತವ್ಯಕ್ಕೆ ಒತ್ತು ಕೊಟ್ಟಿದ್ದ ಜೇ.ಡೆ ಮಾತ್ರ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಹಾಗೆ ನೋಡಿದರೆ ಮಾಫಿಯಾಗಳಿಗೂ ಮಹಾರಾಷ್ಟಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಾಫಿಯಾಗಳ ಕ್ರೂರತೆಯೂ ಅಷ್ಟೇ ಕುಖ್ಯಾತಿ ಪಡೆದಿದೆ. ಮೊನ್ನೆ ಮೊನ್ನೆಯಷ್ಟೇ ನಾಸಿಕ್ ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯನ್ನೇ ಬೆಂಕಿ ಇಕ್ಕಿ ಜೀವಂತ ದಹಿಸಲಾಗಿತ್ತು. ಅದು ಗೊತ್ತಿದ್ದೂ ಜೇ.ಡೆ ಇದಾವುದಕ್ಕೂ ಅಂಜಿರಲಿಲ್ಲ. ಮಾಫಿಯಾಗಳ ಕುರಿತಂತೆ ಸರಣಿ ವರದಿಗಳನ್ನು ಪ್ರಕಟಿಸಿದ್ದರು. ದುರಂತವೆಂದರೆ ಪತ್ರಿಕೋದ್ಯಮವನ್ನೇ ಉಸಿರಾಗಿಸಿದ್ದ ಜೇ.ಡೆ. ತನ್ನ ಕರ್ತವ್ಯಕ್ಕಾಗಿಯೇ ದುಷ್ಕರ್ಮಿಗಳ ಗುಂಡಿಗೆ ತನ್ನ ಗುಂಡಿಗೆ ಒಡ್ಡಬೇಕಾಯಿತು.
ವಿಶೇಷವೆಂದರೆ ಈ ಹತ್ಯೆಯ ಬೆನ್ನಿಗೇ ಪತ್ರಕರ್ತರ ಸಂರಕ್ಷಣೆಯ ಅಂತರಾಷ್ಟ್ರೀಯ ಸಮಿತಿ (ಸಿಪಿಜೆ) ತನ್ನ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಇದು ಕಾಕತಾಳೀಯ ವಿರಬಹುದು. ಆದರೂ ಇದರ ಪ್ರಕಾರ ಪತ್ರಕರ್ತರು ನಿಗೂಢವಾಗಿ ಕೊಲೆಯಾಗುವ ಪಟ್ಟಿಯಲ್ಲಿ ಭಾರತಕ್ಕೆ ಏಳನೇ ಸ್ಥಾನ ದಕ್ಕಿದೆ. ಜಗತ್ತಿನಾದ್ಯಂತ ಹದಿಮೂರು ರಾಷ್ಟ್ರಗಳಲ್ಲಿ ಐದು ಅಥವಾ ಹೆಚ್ಚು ಇಂತಹಾ ಪ್ರಕರಣಗಳು ದಾಖಲಾಗಿದೆ. ಇನ್ನೂ ವಿಶೇಷವೆಂದರೆ ಶೇ 70ರಷ್ಟು ಹತ್ಯಾ ಪ್ರಕರಣಗಳು ಪತ್ರಕರ್ತ ಕರ್ತವ್ಯದಲ್ಲಿದ್ದಾಗಲೇ ನಡೆದಿರುವುದು.
ಒಟ್ಟಿನಲ್ಲಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪತ್ರಕರ್ತರ ಜೀವ ಅಗ್ಗವಾಗಿ ಬಿಟ್ಟಿದೆ ಎಂದಾಯಿತು. ಜನಸಾಮಾನ್ಯ ಧನಿಯನ್ನು ದೂರದಲ್ಲಿದಲ್ಲಿರುವ ಧಣಿಗಳವರೆಗೆ ತಲುಪಿಸುವ, ನೊಂದವರ ಬದುಕಿಗೆ ಆಸರೆಯಾಗುವ, ವ್ಯವಸ್ಥೆ ಹಾದಿತಪ್ಪಿದಾಗ ಎಚ್ಚರಿಸುವ, ಸಮಾಜದಲ್ಲಿ ಅಪರಿಮಿತ ಜವಾಬ್ದಾರಿ ಹೊತ್ತಿರುವ ಪತ್ರಕರ್ತನಿಗೆ ಇಂದು ತನ್ನ ವೃತ್ತಿಗೆ ನ್ಯಾಯ ಸಲ್ಲಿಸಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ದೇಶದಲ್ಲಿ ಭದ್ರತಾ ತೊಡಕಿದೆ. ಪ್ರಜಾಸತ್ತೆ ಉಳಿಯಬೇಕಿದ್ದರೆ ಖಂಡಿತವಾಗಿಯೂ ಪತ್ರಕರ್ತರ ಬದುಕಿಗೆ ಭದ್ರತೆ ನೀಡಲೇಬೇಕಿದೆ.
ಮೊನ್ನೆಯ ಘಟನೆಯಿಂದಾಗಿ ಓರ್ವ ಅಪ್ರತಿಮ ತನಿಖಾವರದಿಗಾರನೋರ್ವನನ್ನು ನಾವು ಕಳೆದುಕೊಂಡಿದ್ದೇವೆ. ಮಾಮೂಲಿನಂತೆ ಸಂತಾಪಗಳು ಹರಿದುಬರುತ್ತಿದೆ. ಗಣ್ಯರೆನಿಸಿಕೊಂಡವರಿಂದ, ಜನಪ್ರತಿನಿಧಿಗಳಿಂದ ನಿರಂತರ ಹೇಳಿಕೆ ಖಂಡನೆಗಳು ಹೊರಬೀಳುತ್ತಿವೆ. ಕೇವಲ ಇಷ್ಟು ಮಾತ್ರಕ್ಕೆ ಇಂತಹಾ ಪಾಶವೀಕೃತ್ಯ ಮಸುಕಾದೀತೇ?
ಖಂಡಿತಾ ಆಗದು, ಆಗಲೂಬಾರದು.

![]() |
| ಜೇ.ಡೆ |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ