ಇಲ್ಲಿ ಸ್ಥಳೀಯರ ಬದುಕೇ ತುಕ್ಕು ಹಿಡಿಯುತ್ತಿದೆ...
ಉಪ್ಪು ನೀರು, ಹಾರು ಬೂದಿಯ ಸಮಸ್ಯೆಯ ಜೊತೆಗೆ ಇದೀಗ ಉಪ್ಪು ನೀರಿನ ಆವಿಯಿಂದಾಗಿ ತಗಡಿನ ಮನೆಯ ಮಾಡು, ವಿದ್ಯುತ್ ತಂತಿ ತುಕ್ಕು ಹಿಡಿದು ತುಂಡಾಗುತ್ತಿದೆ....
ಇದು ನಂದಿಕೂರಿನಲ್ಲಿರುವ ಯುಪಿಸಿಎಲ್ ಎಂಬ ಉಷ್ಣ ವಿದ್ಯುತ್ ಸ್ಥಾವರ ತಂದೊಡ್ಡಿರುವ ಮತ್ತೊಂದು ಸಮಸ್ಯೆ.
ಪಡುಬಿದ್ರಿ ಬಳಿಯ ನಂದಿಕೂರು ಪರಿಸರದಲ್ಲಿ ಆರಂಭಗೊಂಡ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಯುಪಿಸಿಎಲ್) ಸಂಸ್ಥೆ ಆರಂಭದಿಂದಲೂ ವಿವಾದವನ್ನೇ ಮೈಗೆಳೆದುಕೊಂಡಿತ್ತು. ಸ್ಥಳೀಯರ, ಸಂಘ ಸಂಸ್ಥೆಗಳ ಸತತ ವಿರೋಧದ ಮಧ್ಯೆಯೂ ಈ ಉಷ್ಣ ವಿದ್ಯುತ್ ಸ್ಥಾವರ ತಲೆ ಎತ್ತಿ ನಿಂತಿತು. ಕಲ್ಲಿದ್ದಲನ್ನು ಬಳಸಿ ವಿದ್ಯುತ್ ಉತ್ಪಾದಿಸುವಾಗ ಉಳಿಯುವ ತ್ಯಾಜ್ಯವಾದ ಹಾರು ಬೂದಿ ಸುತ್ತ ಮುತ್ತಲಿನ ಜನತೆಯ ಬದುಕನ್ನೇ ಅಸಹನೀಯವಾಗಿಸಿತು. ಇಷ್ಟಕ್ಕೇ ಮುಗಿಯಲಿಲ್ಲ. ಕಾರ್ಖಾನೆಯಿಂದ ಹೊರಬಿಡಲಾಗುವ ಉಪ್ಪು ನೀರು ಪರಿಸರದ ಗದ್ದೆ ತೋಟ ತುಂಬೆಲ್ಲಾ ತುಂಬಿಕೊಂಡು ಹಸಿರು ಬೆಳೆಯನ್ನು ಸರ್ವನಾಶಗೊಳಿಸಿತು. ಪರಿಸರದಲ್ಲಿ ಭತ್ತ ಬೆಳೆಯಲೂ ಸಾಧ್ಯವಾಗದ ಸ್ಥಿತಿ ತಂದೊಡ್ಡಿತು. ಇನ್ನು ಬದುಕು ಸಾಗಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಬಂದು ತಲುಪಿದಾಗ ಅಸಹಾಯಕ ಜನತೆ ರೈತಸಂಘದ ಮೊರೆ ಹೋದರು. ಪರಿಣಾಮ ಯುಪಿಸಿಎಲ್ ಹಠಾವೋ ಪ್ರತಿಭಟನೆ ಜನಾಂದೋಲನದ ರೂಪ ಪಡೆಯಿತು. ಯುಪಿಸಿಎಲ್ ಸ್ಥಾವರ ಬಳಿ, ಉಡುಪಿ ಡಿಸಿ ಕಚೇರಿ ಬಳಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯರ ಉಡುಪಿ ನಿವಾಸದ ಬಳಿ ಪ್ರತಿಭಟನೆ ನಡೆಸಲಾಯಿತು.
ಇದೀಗ ಗಾಯದ ಮೇಲೆ ಬರೆ ಎಳೆದಂತೆ ಯುಪಿಸಿಎಲ್ ತನ್ನ ಮೂರನೇ ಅವತಾರ ತೋರಿಸಿದೆ! ಸುತ್ತಮುತ್ತಲಿನ ಜನರ ಬದುಕಿಗೇ ತುಕ್ಕು ಹಿಡಿಯುವ ಅಪಾಯ ಎದುರಾಗಿದೆ.
ಯುಪಿಸಿಎಲ್ ಉಷ್ಣ ವಿದ್ಯುತ್ ಉತ್ಪಾದನೆಯ ಜೊತೆಗೆ ಹೊರಬೀಳುವ ಉಷ್ಣ ಆವಿಯಿಂದಾಗಿ ಸುತ್ತಮುತ್ತಲಿನ ಮನೆಗಳ ತಗಡಿನ ಛಾವಣಿ, ಸ್ಟೀಲ್ ಕುರ್ಚಿ- ಮೇಜು, ಅಷ್ಟೇ ಅಲ್ಲ, ಸಮೀಪದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗಳಿಗೂ ತುಕ್ಕು ಹಿಡಿಯಲಾರಂಭಿಸಿದೆ. ಸುತ್ತಮುತ್ತಲಿನ ಅಡಿಕೆ, ಮಲ್ಲಿಗೆ, ತೆಂಗು, ತಾಳೆ, ಬಾಳೆಗಳು ಉಷ್ಣ ವಿದ್ಯುತ್ ತಾಪದಿಂದಾಗಿ ಬಸವಳಿದು ಕೆಂಪು ಬಣ್ಣಕ್ಕೆ ತಿರುಗಿ ನಿಂತಿದೆ.
ಎಂದಿನವರೆಗೆ ಸ್ಥಾವರದಲ್ಲಿ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಉಪಯೋಗಿಸುವುದಿಲ್ಲವೋ ಅಲ್ಲಿಯವರೆಗೆ ಸುತ್ತಮುತ್ತಲಿನ ಎಲ್ಲಾ ಕೃಷಿ ಭೂಮಿಗಳು ಬರಡಾಗಲಿವೆ ಎನ್ನುತ್ತಾರೆ ನಂದಿಕೂರು ಜನಜಾಗೃತಿ ಸಮಿತಿ.
ಕೋಲು ಮುರಿಯಬಾರದು, ಹಾವೂ ಸಾಯಬಾರದು ಎಂಬ ಧೋರಣೆ ಅನುಸರಿಸುತ್ತಿರುವ ನಮ್ಮ ಜನ ನಾಯಕರಿಗೆ ಜನತೆಯ ಈ ಗೋಳು ಕೇಳಿಸುವುದೇ ಎಂಬುದಿಲ್ಲಿ ಯಕ್ಷಪ್ರಶ್ನೆಯಾಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ