ಸೈಕಲ್ ಏರಿ
ಉಡುಪಿಗೆ ಬಂದ
ಅಲೆಕ್ಸಾಂಡರ್..!
ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರವನ್ನು ಸೈಕಲ್ ಪೆಡಲ್ ತುಳಿಯುತ್ತಲೇ ಕ್ರಮಿಸಿದ ಸಾಹಸಿಯೋರ್ವರು ನಿನ್ನೆ ಕಟಪಾಡಿಗೆ ಆಗಮಿಸಿದರು.
ಸೈಕಲ್ ನಲ್ಲಿಯೇ ದೇಶ ಸುತ್ತುವ ಸಾಹಸ ಕೈಗೊಂಡಿರುವ ಫ್ರಾನ್ಸ್ ನ ಅಲೆಕ್ಸಾಂಡರ್ ಫ್ರಿಕೋ ಕಟಪಾಡಿಗೆ ಬರುತ್ತಿದ್ದಂತೆಯೇ ಸ್ಥಳೀಯ ಯುವಕರ ತಂಡ ಮಾಲೆ ಹಾಕಿ ಭರ್ಜರಿ ಸ್ವಾಗತ ನೀಡಿತು.
ಸುಮಾರು 38 ವರ್ಷ ಪ್ರಾಯದ ಫ್ರಿಕೋ ಈಗಾಗಲೇ ಸೈಕಲ್ ನಲ್ಲಿ ಹತ್ತು ದೇಶಗಳನ್ನು ಸುತ್ತಿದ್ದಾರೆ. ಮಾ.1ರಂದು ದೆಹಲಿಗೆ ಬಂದಿಳಿದ ಅವರು ಝಾನ್ವಿ, ಚೆನ್ನೈ, ತಂಜಾವುರು, ಮಧುರೈ, ಕೊಚ್ಚಿನ್ ತಿರುಗಿ ಮಂಗಳೂರು ಮೂಲಕ ಉಡುಪಿಗೆ ಆಗಮಿಸಿದ್ದಾರೆ. ಇವರ ಮುಂದಿನ ಪಯಣ ಕಾರವಾರಕ್ಕೆ. ಬಳಿಕ ಗೋವಾಕ್ಕೆ.
ಪ್ರಯಾಸ ಪ್ರಯಾಣ
ಅಲೆಕ್ಸಾಂಡರ್ ಫ್ರಿಕೋ 2010ರ ಆ.9ಕ್ಕೆ ಫ್ರಾನ್ಸ್ ನಿಂದ ಹೊರಟಿದ್ದಾರೆ. ಮೊದಲಿಗೆ ಜರ್ಮನಿ, ಸ್ವಿಝರ್ಲ್ಯಾಂಡ್, ಆಸ್ಟ್ರಿಯಾ, ಸ್ಲೋವಾಕಿಯಾ, ಹಂಗೇರಿ, ಸೆರ್ಬಿಯಾ, ಟರ್ಕಿ, ಬಲ್ಗೇರಿಯಾ ಸುತ್ತಿ ಇದೀಗ ಭಾರತಕ್ಕೆ ಬಂದಿದ್ದಾರೆ.
ನಮ್ಮ ದೇಶದ ಬಗ್ಗೆ ಹೇಳಿದಿಷ್ಟು!ಇಲ್ಲಿ ಉಷ್ಣಾಂಶ ಹೆಚ್ಚು, ಆರಂಭದಲ್ಲಿ ಸಹಿಸಲು ಕಷ್ಟವಾಯಿತು. ಈ ದೇಶದ ಜನರ ಆತಿಥ್ಯಕ್ಕೆ ಮರುಳಾಗಿದ್ದೇನೆ. ಇಲ್ಲಿನ ಬಿರಿಯಾನಿ ತುಂಬಾ ಇಷ್ಟವಾಯಿತು. ಇಲ್ಲಿ ಆಚರಣೆಗಳು ವಿಶಿಷ್ಟವಾಗಿದೆ. ಜನರ ಧಾರ್ಮಿಕ ಮನೋಭಾವನೆ, ದೇವಾಲಯಗಳು ಆಕರ್ಷಣೆ ಮೂಡಿಸಿದೆ. ಯಾಕೋ ಏನೋ ಇಲ್ಲಿನ ಜನ ಟ್ರಾಫಿಕ್ ಜಾಂಗಳ ನಡುವೆಯೂ ಶಾಂತವಾಗಿರುತ್ತಾರೆ. ಇಲ್ಲಿನವರಿಗೆ ತಾಳ್ಮೆ ಹೆಚ್ಚು. ಉಡುಗೆ ತೊಡುಗೆಗಳೂ ಇಷ್ಟವಾದವು.
ಹೊರಟೇ ಬಿಟ್ಟರು!
ಮಾಧ್ಯಮದವರನ್ನು ಬೀಳ್ಕೊಂಡ ಫ್ರಿಕೋ ತಮ್ಮ ಪಯಣವನ್ನು ಮುಂದುವರಿಸಿದರು. ಸಂಜೆಯೊಳಗೆ ಕಾರವಾರ ತಲುಪಿ ಬಳಿಕ ಗೋವಾಕ್ಕೆ ತೆರಳಿ, ನಂತರ ಮುಂಬೈ, ಗುಜರಾತ್, ಪಂಜಾಬ್ ಗೆ ಅಲ್ಲಿಂದ ಪಾಕಿಸ್ತಾನ, ಅಪಘಾನಿಸ್ಥಾನ ತೆರಳುವ ಯೋಜನೆಯಿದೆ ಎಂದ ಅವರು ಉಡುಪಿಗೆ 'ಟಾಟಾ' ಹೇಳಿಯೇ ಬಿಟ್ಟರು.
![]() |
| ಶೀರ್ಷಿಕೆ ಸೇರಿಸಿ |

jeevanave ondu payana.
ಪ್ರತ್ಯುತ್ತರಅಳಿಸಿ