ಮಕ್ಕಳಲ್ಲಿ ಸಹಜವಾಗಿರುವ ಲವಲವಿಕೆಯನ್ನು ಮುರುಟಿಸದೆ ನಿಸರ್ಗದೊಂದಿಗೆ ಏಕೀಭವಿಸು ವಂತಹ ಪರಿಸರವನ್ನು ರೂಪಿಸಿರುವುದೇ ಇಲ್ಲಿನ ಕಲಿಕೆ ಪ್ರಕ್ರಿಯೆಯ ಮೊದಲ ಮೆಟ್ಟಿಲು. ಮರಳಿನಲ್ಲಿ ಅಕ್ಷರಾಭ್ಯಾಸ ಮಾಡುವ ಮತ್ತು ಸೃಜನಶೀಲ ಆಟಗಳನ್ನಾಡುವ ಬರಹದ ಮನೆ, ಮಕ್ಕಳ ಕಲಾ ಕೌಶಲ್ಯದ ವಿಕಾಸಕ್ಕಾಗಿ ನಿರ್ಮಿಸಿರುವ ಕಲಾಶಾಲೆ, ಔಷಧೀಯ ಸಸ್ಯಗಳ ವನವನ್ನು ರೂಪಿಸಿ ಉಪಯುಕ್ತ ಗಿಡಮರಗಳಬಗ್ಗೆ ಪಾಠ, ನೃತ್ಯಾಭಿನಯದ ತರಬೇತಿ ಮತ್ತು ಪ್ರದರ್ಶನಕ್ಕೆ ಬಯಲುರಂಗಮಂದಿರ, ಕಂಪ್ಯೂಟರ್ ಮತ್ತು ಪವರ್ ಪಾಯಿಂಟ್ ಮೂಲಕ ಪಾಠ ಮಾಡುವ ಆಧುನಿಕ ಕಲಿಕಾ ಸೌಲಭ್ಯಗಳಿರುವ ಬಹುಮಾಧ್ಯಮ ಕೇಂದ್ರ, ಸಮರ್ಪಕವಾದ ನೀರಿನ ವ್ಯವಸ್ಥೆಯೊಂದಿಗೆ ಶುಚಿತ್ವದ ಮೌಲ್ಯವನ್ನು ಹೇಳಿಕೊಡುವ ಸುಂದರ ಶೌಚಾಲಯಗಳು ಹೀಗೆ ಮಕ್ಕಳು ಪಾಠೇತರವಾಗಿ ಕಲಿಯಲು ಬೇಕಾದಷ್ಟು ಸಂಗತಿಗಳನ್ನು ರೂಪಿಸಿರುವುದು ಇಲ್ಲಿನ ಆಡಳಿತ ಮಂಡಳಿಯ ಬದ್ಧತೆಗೆ ಸಾಕ್ಷಿಯಾಗಿದೆ.ಸ್ನೇಹ ಶಾಲೆಯಲ್ಲಿ ಪಾಠಪ್ರವಚನಗಳಷ್ಟೇ ಅಲ್ಲದೆ ಮಕ್ಕಳಲ್ಲಿರುವ ಸಾಹಿತ್ಯಾಭಿರುಚಿ ಹಾಗೂ ಕಲಾಸಕ್ತಿಯನ್ನು ಬೆಳೆಸುವ ಕಡೆಗೂ ಗಮನ ನೀಡಲಾಗುತ್ತದೆ. ಕಲಿಕೆಯ ಜತೆಜತೆಗೆ ಆಟ, ನಾಟಕ, ನೃತ್ಯ, ಯಕ್ಷಗಾನ, ಯೋಗ, ಚಿತ್ರಕಲೆ, ಮಣ್ಣಿನಿಂದ ಗೊಂಬೆ ತಯಾರಿ ಹೀಗೆ ದಶದಿಕ್ಕು ಗಳಲ್ಲೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುವಲ್ಲಿ ಸಂಸ್ಥೆಯ ಪ್ರಯತ್ನ ಸಾಗಿದೆ. ಇನ್ನು ಧ್ಯಾನ ಮಂದಿರ, ವೈಜ್ಞಾನಿಕ ಪ್ರಯೋಗಾಲಯ, ಇಂಡೋರ್ ಗೇಮ್ಸ್ ಹಾಲ್, ವಿಸ್ತೃತ ಗ್ರಂಥಾಲಯ ಮುಂತಾದ ಸೌಲಭ್ಯಗಳನ್ನು ಸಾರ್ವಜನಿಕರಿಂದ ಹಾಗೂ ಸರಕಾರದಿಂದ ದೇಣಿಗೆ ಪಡೆದಾದರೂ ನಿರ್ಮಿಸ ಬೇಕೆಂಬ ಮಹತ್ವಾಕಾಂಕ್ಷೆ ಸಂಸ್ಥೆಗೆ ಇದೆ. ಒಂದನೇ ತರಗತಿಯಿಂದಲೇ ದಿನಾಲೂ ಒಂದು ಪೀರಿಯಡ್ ಇಂಗ್ಲಿಷ್ ಪಾಠ ಮಾಡುವ ವಿಧಾನವನ್ನು ಆರಂಭದಿಂದಲೇ ಅಳವಡಿಸಿರುವ ಈ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾ ಪರಿಜ್ಞಾನದಲ್ಲಿಯೂ ಹಿಂದುಳಿದಿಲ್ಲ. ಇಲ್ಲಿ ಪ್ರತಿ ವಿದ್ಯಾರ್ಥಿಯೂ ವರ್ಷದಲ್ಲಿ ಒಂದು ಬಾರಿ ಯಾದರೂ ವೇದಿಕೆಯ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಂತೆಯೇ ಪ್ರತಿ ವಿದ್ಯಾರ್ಥಿಯ ಒಂದಲ್ಲ ಒಂದು ಕೌಶಲ್ಯವನ್ನು ಗುರುತಿಸಿ ಶಾಲಾ ವಾರ್ಷಿಕೋತ್ಸವದಂದು ಬಹುಮಾನ ಕೊಡಲಾಗುತ್ತದೆ. ಬದುಕಿನ ಮೌಲ್ಯಗಳ ಶಿಕ್ಷಣವೂ ಶಾಲೆಯಲ್ಲಿ ಸಿಗಬೇಕೆಂಬುದು ಸಂಸ್ಥೆಯ ಗುರಿಯಾಗಿದೆ. ಉತ್ತಮ ನಡವಳಿಕೆ, ಹೆತ್ತವರ ಮೇಲೆ ಮತ್ತು ಹಿರಿಯರ ಬಗ್ಗೆ ಗೌರವ, ಸಣ್ಣವರತ್ತ ತೋರಬೇಕಾದ ಪ್ರೀತಿ, ಶಿಕ್ಷಕ-ಶಿಕ್ಶಕಿಯರಲ್ಲಿ ವಿದ್ಯಾರ್ಥಿಗಳು ಎಗ್ಗಿಲ್ಲದೆ ಮಾತಾಡಿ ಸಂದೇಹ ಪರಿಹರಿಸಿ ಕೊಳ್ಳುವ ಧೈರ್ಯ, ಪರಿಸರದ ಬಗ್ಗೆ ಕಾಳಜಿ, ಗಿಡಮರಗಳ ಮೇಲೆ ಒಲವು, ಇನ್ನೊಬ್ಬರ ಅಭಿಪ್ರಾಯಗಳಿಗೆ ಗೌರವ ಇತ್ಯಾದಿ ಗುಣಗಳನ್ನು ಬೆಳೆಸುವ ಕಡೆಗೂ ಇಲ್ಲಿ ಗಮನ ಹರಿಸಲಾಗುತ್ತದೆ.ಏಳನೇ ತರಗತಿಯ ಮೊದಲ ತಂಡ ಹೊರಬರುವಾಗ ಅವರಿಗೆ ಇದೇ ಪರಿಸರದ ಕಲಿಕೆಯ ಮುಂದುವರಿಕೆಗಾಗಿ 2003ರಿಂದ ಸ್ನೇಹ ಪ್ರೌಢಶಾಲೆಯನ್ನು ಆಂಗ್ಲ ಮಾಧ್ಯಮದಲ್ಲಿ ಆರಂಭಿ ಸಲಾಯಿತು. ಈ ಶಾಲೆಯು ಕಳೆದ ನಾಲ್ಕು ವರ್ಷಗಳಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ ಸತತ ನೂರು ಶೇಕಡಾ ಫಲಿತಂಶವನ್ನು ಗಳಿಸಿದೆ. ಇದು ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೂ ಅರಿವಿನ ಸ್ಮರಣೆ ನೀಡುವ ಶಾಲೆಯಾಗಿದೆ. ಹಾಗಾಗಿ ಎಂಟನೇ ತರಗತಿಗೆ ಸೇರುವಾಗ ಕೊನೆಯ ಶ್ರೇಣಿಯಲ್ಲಿದ್ದ ಮಕ್ಕಳೂ ಎಸ್. ಎಸ್. ಎಲ್. ಸಿ. ಯಲ್ಲಿ ಪ್ರಥಮ ಶ್ರೇಣಿ ಹಾಗೂ ಡಿಸ್ಟಿಂಕ್ಷನ್ ಕೂಡಾ ಗಳಿಸುತ್ತಾರೆ. ಇಲ್ಲಿ ಪಾಠೇತರವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಾರ್ಯಾಗಾರಗಳನ್ನು ನಡೆಸು ತ್ತಿರುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನ ಸಾಧ್ಯವಾಗಿದೆ. ಮಕ್ಕಳಿಗೆ ಕಲಾಕೌಶಲ್ಯಗಳ ತರಬೇತಿ ಕಮ್ಮಟಗಳು, ವಿಜ್ಞಾನ ವಿಚಾರ ಸಂಕಿರಣಗಳು, ಜಿಲ್ಲಾ ಮಟ್ಟದ ಶಿಕ್ಷಕರ ಚೈತನ್ಯ ತರಬೇತಿ ಶಿಬಿರ, ಸ್ನೇಹ ಪ್ರಶಸ್ತಿ ಪ್ರದಾನ, ಪ್ರತಿ ವರ್ಷವೂ ಪ್ರವಾಸ ಮತ್ತು ಮಕ್ಕಳ ದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಮಕ್ಕಳ ಸಾಹಿತ್ಯಿಕ ಮತ್ತು ಚಿತ್ರ ಸಂಪುಟಗಳ ಹಸ್ತಪ್ರತಿ, ನಾಟಕೋತ್ಸವ ಮತ್ತು ಯಕ್ಷಗಾನ ಮುಂತಾದ ವೈವಿಧ್ಯಮಯ ಚಟುವಟಿಕೆಗಳಿಂದ ಶಲೆಯು ಕ್ರಿಯಾಶೀಲವಾಗಿದೆ. ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಸಾಮಾಜಿಕ-ರಾಜಕೀಯ ಗಣ್ಯರು ಕನ್ನಡ ಮಾಧ್ಯಮದಲ್ಲಿ ಇದು ಅತ್ಯುತ್ತಮ ಶಾಲೆ ಎಂಬುದಾಗಿ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಎಸ್. ಎಸ್. ಎಲ್. ಸಿ. ಯ ನಾಲ್ಕು ವರ್ಷಗಳ ಸತತ ನೂರು ಶೇಕಡಾ ಫಲಿತಾಂಶಕ್ಕಾಗಿ ಸ್ನೇಹ ಪ್ರೌಢಶಾಲೆಯು ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ಪ್ರಶಸ್ತಿ ಪಡೆಯುತ್ತಿದೆ. ಅಲ್ಲದೆ ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ’ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ನಡೆಸುವ ಶಾಲಾ ಮಕ್ಕಳ ಸಾಹಿತ್ಯಿಕ ಹಸ್ತಪ್ರತಿಗಳ ಸ್ಪರ್ಧೆಯಲ್ಲಿ ಕಳೆದ ಎಂಟು ವರ್ಷಗಳಿಂದ ಪ್ರಥಮ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಪ್ರತಿಭಾ ಕಾರಂಜಿಯ ಸ್ಪರ್ಧೆಗಳು, ಧರ್ಮಸ್ಥಳದ ಯೋಗ ಮತ್ತು ನೈತಿಕ ಕೇಂದ್ರದವರು ನಡೆಸುವ ಸ್ಪರ್ಧೆಗಳು, ಸ್ಥಳೀಯ ಸಂಘಸಂಸ್ಥೆಗಳು ನಡೆಸುವ ಸ್ಪರ್ಧೆಗಳಲ್ಲಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಈ ಶಾಲೆಗಳ ಮಕ್ಕಳು ಬಹುಮಾನಗಳನ್ನು ಬಾಚುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಲಿಷ್ಠಗೊಳಿಸುವುದು ಸಮಾಜದ ಮತ್ತು ರಾಷ್ಟ್ರದ ಬಲವರ್ಧನೆಗೆ ಮೊದಲ ಸೋಪಾನ. ಈ ದೃಷ್ಟಿಯಿಟ್ಟುಕೊಂಡು ಶಿಕ್ಷಣದೊಂದಿಗೆ ಮಕ್ಕಳ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಸಮಾನಾಸಕ್ತ ಸ್ನೇಹಿತರು ಸೇರಿ ಕಟ್ಟಿದ ಸಂಸ್ಥೆಗೆ "ಸ್ನೇಹ ಶಿಕ್ಷಣ ಸಂಸ್ಥೆ" ಎಂದು ಹೆಸರಿಸಲಾಗಿದೆ. ಮಾನವ ಸಮಾಜದಲ್ಲಿ ಸ್ನೇಹದ ಮೌಲ್ಯವು ವ್ಯಪಕವಾದಾಗಲೇ ಶಾಂತಿಗೆ ಅವಕಾಶವಾಗುವುದು. ಈ ಸ್ನೇಹಿತರ ಕೂಟದಲ್ಲಿ ಅನುಭವೀ ಪ್ರಾಧ್ಯಾಪಕರು, ವೈದ್ಯರು, ಇಂಜಿನಿಯರರು ಹಾಗೂ ಉದ್ಯಮಿಗಳಿದ್ದಾರೆ. ಬದಲಾಗುತ್ತಿರುವ ಮುಂದಿನ ಯುಗಕ್ಕೆ ಅಣಿಯಾಗುವ ಹೊಸ ಪೀಳಿಗೆಯನ್ನು ರೂಪಿಸುವುದು ಗುರಿಯಾಗಿದೆ.
aksharamaitri@gmail.com
ನಿಸರ್ಗದ ಮಡಿಲಲ್ಲಿ ಸ್ನೇಹ ಶಿಕ್ಷಣ !
![]() |
ಚಿಣ್ಣರ ಕಲರವ |
ಸಸ್ಯ ಸಮೃದ್ಧ ಪರಿಸರವುಳ್ಳ ಶಾಲೆ ನೋಡಬೇಕಿದ್ದರೆ ಬನ್ನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ!
ಇಲ್ಲಿ ಪ್ರತಿಯೊಂದು ಕಟ್ಟಡದ ಮೇಲೂ ಮರದ ನೆರಳಿದೆ... ಆಟದ ಬಯಲಲ್ಲೂ ಮರಗಳ ಛಾಯೆ ಆವರಿಸಿದೆ... ಮಕ್ಕಳ ಉಲ್ಲಾಸ ವರ್ಧನೆಗಾಗಿ ಓಡಾಡಲು ಸಹಜ ಅರಣ್ಯವಿದೆ.... ಮಕ್ಕಳ ದೈಹಿಕ-ಮಾನಸಿಕ ದಣಿವಿನ ನಿವಾರಣೆಗೆ ಆಮ್ಲಜನಕ ತುಂಬಿದ ವಾತವರಣವಿದೆ....ಸುಳ್ಯ ಬಸ್ಟೇಂಡಿನಿಂದ ಮಡಿಕೇರಿಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿಲೊಮೀಟರ್ ದೂರದಲ್ಲಿ ಬಲಗಡೆಯ ಗುಡ್ಡದ ಮೇಲೆ ನಿತ್ಯ ಹರಿದ್ವರ್ಣದ ಮರಗಿಡಗಳಿಂದ ತುಂಬಿದ ಪರಿಸರದಲ್ಲಿ ಸ್ನೇಹ ಶಾಲೆ ಇದೆ. ಪೇಟೆಯಿಂದ ಹೊರಗೆ ಅಂಗಡಿಗಳಿಂದ ದೂರದಲ್ಲಿದ್ದು ದೃಶ್ಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕೆ ಒಳಗಾಗದೆ ಸುಂದರ ನಿಸರ್ಗದ ಮಡಿಲಲ್ಲಿ ಶಿಕ್ಷಣ ಸಾಗುತ್ತಿದೆ. ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನಡೆದರೆ ಮಾತ್ರ ನಮ್ಮ ಮಕ್ಕಳಿಗೆ ಈ ನೆಲದ ಸಂಸ್ಕೃತಿ ಬಂದೀತು ಮತ್ತು ಅದು ಮುಂದಕ್ಕೆ ಉಳಿದೀತು ಎಂಬ ಧ್ಯೇಯ ಹೊಂದಿದ ಸಮಾನಾಸಕ್ತ ಸ್ನೇಹಿತರು ಸೇರಿ 1996 ರಲ್ಲಿ ಕಟ್ಟಿದ್ದು ಸ್ನೇಹ ಶಿಕ್ಷಣ ಸಂಸ್ಥೆ. ಈ ಸಂಸ್ಥೆಯು ಆ ವರ್ಷವೇ ಸ್ಥಾಪಿಸಿದ ಅನುದಾನ ರಹಿತವಾದ ಕನ್ನಡ ಮಾಧ್ಯಮದ ಸ್ನೇಹ ಪ್ರಾಥಮಿಕ ಶಾಲೆಯು ಹಂತ ಹಂತವಾಗಿ ಬೆಳೆದು ಕನ್ನಡಕ್ಕೆ ಗೌರವ ತಂದಿದೆ. ಶಾಲೆಯಲ್ಲಿ ಉತ್ತಮವಾದ ವ್ಯವಸ್ಥೆಗಳನ್ನು ಹೊಂದಿಸಿ ಕೊಂಡರೆ ಕನ್ನಡ ಮಾಧ್ಯಮಕ್ಕೂ ಹಿರಿಮೆ ತರಬಹುದೆಂಬ ಸ್ಥಾಪಕರ ಆಶಯ ಬಹುಪಾಲು ಈಡೇರಿದೆ.
ಮಕ್ಕಳಲ್ಲಿ ಸಹಜವಾಗಿರುವ ಲವಲವಿಕೆಯನ್ನು ಮುರುಟಿಸದೆ ನಿಸರ್ಗದೊಂದಿಗೆ ಏಕೀಭವಿಸು ವಂತಹ ಪರಿಸರವನ್ನು ರೂಪಿಸಿರುವುದೇ ಇಲ್ಲಿನ ಕಲಿಕೆ ಪ್ರಕ್ರಿಯೆಯ ಮೊದಲ ಮೆಟ್ಟಿಲು. ಮರಳಿನಲ್ಲಿ ಅಕ್ಷರಾಭ್ಯಾಸ ಮಾಡುವ ಮತ್ತು ಸೃಜನಶೀಲ ಆಟಗಳನ್ನಾಡುವ ಬರಹದ ಮನೆ, ಮಕ್ಕಳ ಕಲಾ ಕೌಶಲ್ಯದ ವಿಕಾಸಕ್ಕಾಗಿ ನಿರ್ಮಿಸಿರುವ ಕಲಾಶಾಲೆ, ಔಷಧೀಯ ಸಸ್ಯಗಳ ವನವನ್ನು ರೂಪಿಸಿ ಉಪಯುಕ್ತ ಗಿಡಮರಗಳಬಗ್ಗೆ ಪಾಠ, ನೃತ್ಯಾಭಿನಯದ ತರಬೇತಿ ಮತ್ತು ಪ್ರದರ್ಶನಕ್ಕೆ ಬಯಲುರಂಗಮಂದಿರ, ಕಂಪ್ಯೂಟರ್ ಮತ್ತು ಪವರ್ ಪಾಯಿಂಟ್ ಮೂಲಕ ಪಾಠ ಮಾಡುವ ಆಧುನಿಕ ಕಲಿಕಾ ಸೌಲಭ್ಯಗಳಿರುವ ಬಹುಮಾಧ್ಯಮ ಕೇಂದ್ರ, ಸಮರ್ಪಕವಾದ ನೀರಿನ ವ್ಯವಸ್ಥೆಯೊಂದಿಗೆ ಶುಚಿತ್ವದ ಮೌಲ್ಯವನ್ನು ಹೇಳಿಕೊಡುವ ಸುಂದರ ಶೌಚಾಲಯಗಳು ಹೀಗೆ ಮಕ್ಕಳು ಪಾಠೇತರವಾಗಿ ಕಲಿಯಲು ಬೇಕಾದಷ್ಟು ಸಂಗತಿಗಳನ್ನು ರೂಪಿಸಿರುವುದು ಇಲ್ಲಿನ ಆಡಳಿತ ಮಂಡಳಿಯ ಬದ್ಧತೆಗೆ ಸಾಕ್ಷಿಯಾಗಿದೆ.ಸ್ನೇಹ ಶಾಲೆಯಲ್ಲಿ ಪಾಠಪ್ರವಚನಗಳಷ್ಟೇ ಅಲ್ಲದೆ ಮಕ್ಕಳಲ್ಲಿರುವ ಸಾಹಿತ್ಯಾಭಿರುಚಿ ಹಾಗೂ ಕಲಾಸಕ್ತಿಯನ್ನು ಬೆಳೆಸುವ ಕಡೆಗೂ ಗಮನ ನೀಡಲಾಗುತ್ತದೆ. ಕಲಿಕೆಯ ಜತೆಜತೆಗೆ ಆಟ, ನಾಟಕ, ನೃತ್ಯ, ಯಕ್ಷಗಾನ, ಯೋಗ, ಚಿತ್ರಕಲೆ, ಮಣ್ಣಿನಿಂದ ಗೊಂಬೆ ತಯಾರಿ ಹೀಗೆ ದಶದಿಕ್ಕು ಗಳಲ್ಲೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುವಲ್ಲಿ ಸಂಸ್ಥೆಯ ಪ್ರಯತ್ನ ಸಾಗಿದೆ. ಇನ್ನು ಧ್ಯಾನ ಮಂದಿರ, ವೈಜ್ಞಾನಿಕ ಪ್ರಯೋಗಾಲಯ, ಇಂಡೋರ್ ಗೇಮ್ಸ್ ಹಾಲ್, ವಿಸ್ತೃತ ಗ್ರಂಥಾಲಯ ಮುಂತಾದ ಸೌಲಭ್ಯಗಳನ್ನು ಸಾರ್ವಜನಿಕರಿಂದ ಹಾಗೂ ಸರಕಾರದಿಂದ ದೇಣಿಗೆ ಪಡೆದಾದರೂ ನಿರ್ಮಿಸ ಬೇಕೆಂಬ ಮಹತ್ವಾಕಾಂಕ್ಷೆ ಸಂಸ್ಥೆಗೆ ಇದೆ. ಒಂದನೇ ತರಗತಿಯಿಂದಲೇ ದಿನಾಲೂ ಒಂದು ಪೀರಿಯಡ್ ಇಂಗ್ಲಿಷ್ ಪಾಠ ಮಾಡುವ ವಿಧಾನವನ್ನು ಆರಂಭದಿಂದಲೇ ಅಳವಡಿಸಿರುವ ಈ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾ ಪರಿಜ್ಞಾನದಲ್ಲಿಯೂ ಹಿಂದುಳಿದಿಲ್ಲ. ಇಲ್ಲಿ ಪ್ರತಿ ವಿದ್ಯಾರ್ಥಿಯೂ ವರ್ಷದಲ್ಲಿ ಒಂದು ಬಾರಿ ಯಾದರೂ ವೇದಿಕೆಯ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಂತೆಯೇ ಪ್ರತಿ ವಿದ್ಯಾರ್ಥಿಯ ಒಂದಲ್ಲ ಒಂದು ಕೌಶಲ್ಯವನ್ನು ಗುರುತಿಸಿ ಶಾಲಾ ವಾರ್ಷಿಕೋತ್ಸವದಂದು ಬಹುಮಾನ ಕೊಡಲಾಗುತ್ತದೆ. ಬದುಕಿನ ಮೌಲ್ಯಗಳ ಶಿಕ್ಷಣವೂ ಶಾಲೆಯಲ್ಲಿ ಸಿಗಬೇಕೆಂಬುದು ಸಂಸ್ಥೆಯ ಗುರಿಯಾಗಿದೆ. ಉತ್ತಮ ನಡವಳಿಕೆ, ಹೆತ್ತವರ ಮೇಲೆ ಮತ್ತು ಹಿರಿಯರ ಬಗ್ಗೆ ಗೌರವ, ಸಣ್ಣವರತ್ತ ತೋರಬೇಕಾದ ಪ್ರೀತಿ, ಶಿಕ್ಷಕ-ಶಿಕ್ಶಕಿಯರಲ್ಲಿ ವಿದ್ಯಾರ್ಥಿಗಳು ಎಗ್ಗಿಲ್ಲದೆ ಮಾತಾಡಿ ಸಂದೇಹ ಪರಿಹರಿಸಿ ಕೊಳ್ಳುವ ಧೈರ್ಯ, ಪರಿಸರದ ಬಗ್ಗೆ ಕಾಳಜಿ, ಗಿಡಮರಗಳ ಮೇಲೆ ಒಲವು, ಇನ್ನೊಬ್ಬರ ಅಭಿಪ್ರಾಯಗಳಿಗೆ ಗೌರವ ಇತ್ಯಾದಿ ಗುಣಗಳನ್ನು ಬೆಳೆಸುವ ಕಡೆಗೂ ಇಲ್ಲಿ ಗಮನ ಹರಿಸಲಾಗುತ್ತದೆ.ಏಳನೇ ತರಗತಿಯ ಮೊದಲ ತಂಡ ಹೊರಬರುವಾಗ ಅವರಿಗೆ ಇದೇ ಪರಿಸರದ ಕಲಿಕೆಯ ಮುಂದುವರಿಕೆಗಾಗಿ 2003ರಿಂದ ಸ್ನೇಹ ಪ್ರೌಢಶಾಲೆಯನ್ನು ಆಂಗ್ಲ ಮಾಧ್ಯಮದಲ್ಲಿ ಆರಂಭಿ ಸಲಾಯಿತು. ಈ ಶಾಲೆಯು ಕಳೆದ ನಾಲ್ಕು ವರ್ಷಗಳಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ ಸತತ ನೂರು ಶೇಕಡಾ ಫಲಿತಂಶವನ್ನು ಗಳಿಸಿದೆ. ಇದು ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೂ ಅರಿವಿನ ಸ್ಮರಣೆ ನೀಡುವ ಶಾಲೆಯಾಗಿದೆ. ಹಾಗಾಗಿ ಎಂಟನೇ ತರಗತಿಗೆ ಸೇರುವಾಗ ಕೊನೆಯ ಶ್ರೇಣಿಯಲ್ಲಿದ್ದ ಮಕ್ಕಳೂ ಎಸ್. ಎಸ್. ಎಲ್. ಸಿ. ಯಲ್ಲಿ ಪ್ರಥಮ ಶ್ರೇಣಿ ಹಾಗೂ ಡಿಸ್ಟಿಂಕ್ಷನ್ ಕೂಡಾ ಗಳಿಸುತ್ತಾರೆ. ಇಲ್ಲಿ ಪಾಠೇತರವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಾರ್ಯಾಗಾರಗಳನ್ನು ನಡೆಸು ತ್ತಿರುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನ ಸಾಧ್ಯವಾಗಿದೆ. ಮಕ್ಕಳಿಗೆ ಕಲಾಕೌಶಲ್ಯಗಳ ತರಬೇತಿ ಕಮ್ಮಟಗಳು, ವಿಜ್ಞಾನ ವಿಚಾರ ಸಂಕಿರಣಗಳು, ಜಿಲ್ಲಾ ಮಟ್ಟದ ಶಿಕ್ಷಕರ ಚೈತನ್ಯ ತರಬೇತಿ ಶಿಬಿರ, ಸ್ನೇಹ ಪ್ರಶಸ್ತಿ ಪ್ರದಾನ, ಪ್ರತಿ ವರ್ಷವೂ ಪ್ರವಾಸ ಮತ್ತು ಮಕ್ಕಳ ದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಮಕ್ಕಳ ಸಾಹಿತ್ಯಿಕ ಮತ್ತು ಚಿತ್ರ ಸಂಪುಟಗಳ ಹಸ್ತಪ್ರತಿ, ನಾಟಕೋತ್ಸವ ಮತ್ತು ಯಕ್ಷಗಾನ ಮುಂತಾದ ವೈವಿಧ್ಯಮಯ ಚಟುವಟಿಕೆಗಳಿಂದ ಶಲೆಯು ಕ್ರಿಯಾಶೀಲವಾಗಿದೆ. ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಸಾಮಾಜಿಕ-ರಾಜಕೀಯ ಗಣ್ಯರು ಕನ್ನಡ ಮಾಧ್ಯಮದಲ್ಲಿ ಇದು ಅತ್ಯುತ್ತಮ ಶಾಲೆ ಎಂಬುದಾಗಿ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಎಸ್. ಎಸ್. ಎಲ್. ಸಿ. ಯ ನಾಲ್ಕು ವರ್ಷಗಳ ಸತತ ನೂರು ಶೇಕಡಾ ಫಲಿತಾಂಶಕ್ಕಾಗಿ ಸ್ನೇಹ ಪ್ರೌಢಶಾಲೆಯು ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ಪ್ರಶಸ್ತಿ ಪಡೆಯುತ್ತಿದೆ. ಅಲ್ಲದೆ ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ’ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ನಡೆಸುವ ಶಾಲಾ ಮಕ್ಕಳ ಸಾಹಿತ್ಯಿಕ ಹಸ್ತಪ್ರತಿಗಳ ಸ್ಪರ್ಧೆಯಲ್ಲಿ ಕಳೆದ ಎಂಟು ವರ್ಷಗಳಿಂದ ಪ್ರಥಮ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಪ್ರತಿಭಾ ಕಾರಂಜಿಯ ಸ್ಪರ್ಧೆಗಳು, ಧರ್ಮಸ್ಥಳದ ಯೋಗ ಮತ್ತು ನೈತಿಕ ಕೇಂದ್ರದವರು ನಡೆಸುವ ಸ್ಪರ್ಧೆಗಳು, ಸ್ಥಳೀಯ ಸಂಘಸಂಸ್ಥೆಗಳು ನಡೆಸುವ ಸ್ಪರ್ಧೆಗಳಲ್ಲಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಈ ಶಾಲೆಗಳ ಮಕ್ಕಳು ಬಹುಮಾನಗಳನ್ನು ಬಾಚುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಲಿಷ್ಠಗೊಳಿಸುವುದು ಸಮಾಜದ ಮತ್ತು ರಾಷ್ಟ್ರದ ಬಲವರ್ಧನೆಗೆ ಮೊದಲ ಸೋಪಾನ. ಈ ದೃಷ್ಟಿಯಿಟ್ಟುಕೊಂಡು ಶಿಕ್ಷಣದೊಂದಿಗೆ ಮಕ್ಕಳ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಸಮಾನಾಸಕ್ತ ಸ್ನೇಹಿತರು ಸೇರಿ ಕಟ್ಟಿದ ಸಂಸ್ಥೆಗೆ "ಸ್ನೇಹ ಶಿಕ್ಷಣ ಸಂಸ್ಥೆ" ಎಂದು ಹೆಸರಿಸಲಾಗಿದೆ. ಮಾನವ ಸಮಾಜದಲ್ಲಿ ಸ್ನೇಹದ ಮೌಲ್ಯವು ವ್ಯಪಕವಾದಾಗಲೇ ಶಾಂತಿಗೆ ಅವಕಾಶವಾಗುವುದು. ಈ ಸ್ನೇಹಿತರ ಕೂಟದಲ್ಲಿ ಅನುಭವೀ ಪ್ರಾಧ್ಯಾಪಕರು, ವೈದ್ಯರು, ಇಂಜಿನಿಯರರು ಹಾಗೂ ಉದ್ಯಮಿಗಳಿದ್ದಾರೆ. ಬದಲಾಗುತ್ತಿರುವ ಮುಂದಿನ ಯುಗಕ್ಕೆ ಅಣಿಯಾಗುವ ಹೊಸ ಪೀಳಿಗೆಯನ್ನು ರೂಪಿಸುವುದು ಗುರಿಯಾಗಿದೆ.
aksharamaitri@gmail.com

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ